March 14, 2026
WhatsApp Image 2026-03-13 at 7.52.31 AM (2)

ಕರ್ನಾಟಕ ರಾಜ್ಯ ಕುಲಾಲ/ಕುಂಬಾರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಮಂಗಳೂರು, ಮತ್ತು ಕುಲಾಲ ಸಮಾಜ ಸುಧಾರಕ ಸಂಘ (ರಿ.) ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ” ಕುಲಾಲ ಪ್ರೀಮಿಯರ್ ಲೀಗ್ ” ಕುಂದಾಪುರ ಪಂದ್ಯಾವಳಿಯು ಮಾ.15 ರಂದು ಗಾಂಧಿ ಮೈದಾನ ಕುಂದಾಪುರದಲ್ಲಿ ನಡೆಯಲಿದೆ.

ಪಂದ್ಯಾವಳಿಯ ಉದ್ಘಾಟನೆಯನ್ನು ಕುಲಾಲ ರತ್ನ ಸ್ಥಾಪಕಾಧ್ಯಕ್ಷರಾದ ಡಾ|| ಎಂ. ವಿ. ಕುಲಾಲ ಇವರು ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷರಾಗಿ ಕುಂದಾಪುರ ಕುಲಾಲ ಸಂಘದ ಅಧ್ಯಕ್ಷರಾದ ರಾಘವೇಂದ್ರ ಕುಲಾಲ ಹೆಮ್ಮಾಡಿ, ಶುಭಶಂಸನೆ, ಕರ್ನಾಟಕ ರಾಜ್ಯ ಕುಲಾಲ/ಕುಂಬಾರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಮಂಗಳೂರು ಇದರ ಸ್ಥಾಪಕ ಅಧ್ಯಕ್ಷರಾದ ಡಾ| ಅಣ್ಣಯ್ಯ ಕುಲಾಲ, ಗೌರವ ಉಪಸ್ಥಿತಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ, ಬೈಂದೂರು ಮಾಜಿ ಶಾಸಕರಾದ ಗೋಪಾಲ್ ಪೂಜಾರಿ ಭಾಗವಹಿಸಲಿದ್ದಾರೆ.

ಡಾ.ವೀರಭದ್ರಯ್ಯ ಟಿ, ಡಾ.ಉಮೇಶ್ ಪುತ್ರನ್, ವಸಂತ್ ಗಿಳಿಯಾರ್, ಕೆ.ಸಿ ರಾಜೇಶ್, ರಂಜಿತ್ ಕುಲಾಲ್ ಶಿರಿಯಾರ,ಮನೋಜ್ ನಾಯರ್, ಸತೀಶ್ ಕುಲಾಲ ನಡೂರು, ಮಂಜುನಾಥ ಕುಲಾಲ ಜನ್ಸಾಲೆ, ಶ್ರೀಮತಿ ಪ್ರತಿಮಾ ವಿನೋದ ಕುಲಾಲ, ಹರೀಶ ಕುಲಾಲ ಕಟ್ಕೇರಿ, ಸುರೇಶ ಕುಲಾಲ ಮೆಟ್ಟಿನಹೊಳೆ ಮುಂತಾದವರು ಪಂದ್ಯಾವಳಿಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.