
ಕಾರವಾರ: ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಪ್ರಪಂಚವನ್ನೇ ಶೇಕ್ ಮಾಡಿದೆ. ಅದರಲ್ಲೂ ಭಾರತೀಯರ ಮೇಲೆ ವಿವಿಧ ರೀತಿಯ ಸಮಸ್ಯೆಗಳನ್ನು ಉಂಟು ಮಾಡಿದೆ. ಈಗಂತೂ ಹೋಟೆಲ್‌ಗಳು ಎಲ್‌ಪಿಜಿಗಾಗಿ ಬಹಳ ಸಂಕಷ್ಟ ಎದುರಿಸುತ್ತಿವೆ. ಅದಾಗ್ಯೂ ಈಗ ಕಾರವಾರಕ್ಕೆ ಯುಎಇಯಿಂದ ಹಡಗು ಬಂದು ತಲುಪಿದೆ.
ಹೌದು, ಸಮುದ್ರದಲ್ಲೂ ಸಹ ಯುದ್ಧದ ಭೀತಿ ಇದ್ದು, ಈಗಾಗಲೇ ಇರಾನ್ ಹಾಗೂ ಇಸ್ರೇಲ್ ಹಡಗುಗಳು ಸಮುದ್ರದ ತಳ ಸೇರಿವೆ. ಆದರೆ ಈ ಹಡಗು ಈ ರೀತಿಯ ಯಾವುದೇ ಸಮಸ್ಯೆ ಇಲ್ಲದೆ ಭಾರತ ತಲುಪಿದ್ದು, ಕಡಲ ತೀರದ ಜನರು ಸಂತಸ ಹೊರಹಾಕಿದ್ದಾರೆ. ಇರಾನ್-ಇಸ್ರೇಲ್ ಯುದ್ಧದ ಕಾರಣಕ್ಕೆ ಹರ್ಮೋಜ್ ಜಲಸಂಧಿಯಲ್ಲಿ ಇರಾನ್ ನಿರ್ಬಂಧ ಹೇರಿದೆ. ಆದಾಗ್ಯೂ ‘ಚೆಂಗ್ ಎಕ್ಸ್’ ಎಂಬ ಹೆಸರಿನ ಹಡಗು ಕಾರವಾರ ಬಂದರಿಗೆ ಯಶಸ್ವಿಯಾಗಿ ತಲುಪಿದೆ.
ಯುಎಇಯಿಂದ 3100 ಟನ್ ಬಿಟುಮೆನ್ ಅಂದರೆ ಕಚ್ಚಾ ಡಾಂಬರ್ ಹೊತ್ತ ಹಡಗು ಕಾರವಾರ ಬಂದರಿಗೆ ಆಗಮಿಸಿದೆ. 5.500 ಸಾವಿರ ಟನ್ ಸಾಮರ್ಥ್ಯದ ಈ ಹಡಗಿನಲ್ಲಿ 3100 ಟನ್ ಕಚ್ಚಾ ಡಾಂಬರ್ ತರಲಾಗಿದೆ. ಮಾರ್ಚ್ 3 ರಂದು ಯುಎಇಯಿಂದ ಈ ಹಡಗು ಹೊರಟಿದ್ದು, ಶುಕ್ರವಾರ ಕಾರವಾರಕ್ಕೆ ಬಂದು ತಲುಪಿದೆ. ಇನ್ನು ಶುಕ್ರವಾರ ಸಂಜೆ ಇಲ್ಲಿಂದ ಈ ಹಡಗು ವಾಪಾಸ್ ಆಗಿದ್ದು ಎಲ್ಲಿಗೆ ಹೋಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.
https://twitter.com/i/status/2032454981287293433
