March 23, 2026
WhatsApp Image 2026-02-05 at 11.28.13 AM

ಉಡುಪಿ ತಾಲೂಕಿನ ಬಡಾನಿಡಿಯೂರು ಗ್ರಾಮದ ಕದಿಕೆಯಲ್ಲಿರುವ ಅಣ್ಣನ ಮನೆಗೆ ಬಂದಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂಗೀತಾ (24) ಎಂಬ ಯುವತಿ ಫೆಬ್ರವರಿ 2ರಿಂದ ನಾಪತ್ತೆಯಾಗಿದ್ದಾಳೆ. ನಾಪತ್ತೆಯಾದ ಸಂಗೀತಾ ಸುಮಾರು 4 ಅಡಿ 5 ಇಂಚು ಎತ್ತರ ಹೊಂದಿದ್ದು, ಎಣ್ಣೆಗಪ್ಪು ಮೈಬಣ್ಣವಿದ್ದಾರೆ. ಅವರು ಕನ್ನಡ, ಹಿಂದಿ ಹಾಗೂ ಕೊಂಕಣಿ ಭಾಷೆಗಳನ್ನು ಮಾತನಾಡುತ್ತಾರೆ.

ಸಂಗೀತಾ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಮಲ್ಪೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 0820-2537999, ಮಲ್ಪೆ ಪಿ.ಎಸ್.ಐ ಅವರ ಮೊಬೈಲ್ ಸಂಖ್ಯೆ 9480805447 ಅಥವಾ ಮಲ್ಪೆ ವೃತ್ತ ನಿರೀಕ್ಷಕರ ಮೊಬೈಲ್ ಸಂಖ್ಯೆ 9480805430 ಅನ್ನು ಸಂಪರ್ಕಿಸುವAತೆ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.