March 23, 2026
WhatsApp Image 2026-02-03 at 3.07.49 PM

ಅಕ್ರಮ ಸಂಬಂಧ ವಿಚಾರವಾಗಿ ನಡೆದ ಗಲಾಟೆ ವೇಳೆ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ನಡೆದಿದೆ.

ಜ್ಯೋತಿಷಿ ಕಮಲಾಕರ್ ಭಟ್ ಜೊತೆ ಸುಚಿತ್ರ ಎಂಬಾಕೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ತಿಳಿದ ಸುಚಿತ್ರಳ ಪುತ್ರಿ ತನ್ನ ತಂದೆ ಮಹೇಶ್ ನಾಯ್ಕ್ ಗೆ ಹೇಳಿದ್ದಾಳೆ. ಹೀಗಾಗಿ ಮಹೇಶ್ ನಾಯ್ಕ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಇದರಿಂದ ಕೆರಳಿದ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಮತ್ತು ಸಹಚರರು ಮಹೇಶ್ ನಾಯ್ಕ್ ಹಾಗೂ ಜೊತೆಗಿದ್ದವರ ಮೇಲೆ ಹಲ್ಲೆ ನಡೆಸಿದ್ದರು.

ಘಟನೆಯಲ್ಲಿ ಸುಚಿತ್ರಾ ಪತಿ ಮಹೇಶ್, ವಸಂತ್ ನಾಯ್ಕ ಮತ್ತು ಕುಮಾರ್ ಗಂಭೀರ ಗಾಯಗೊಂಡಿದ್ದು, ಈ ಪೈಕಿ ವಸಂತ್ ನಾಯ್ಕ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಲೆ ಬಳಿಕ ಎಸ್ಕೇಪ್ ಆಗಲು ಯತ್ನಿಸಿದ ಖ್ಯಾತ ಜೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ಸೇರಿ ನಾಲ್ವರನ್ನು ಸಿದ್ದಾಪುರದಿಂದ ಬಂಧಿಸಲಾಗಿದ್ದು, ಶಿವಮೊಗ್ಗದಲ್ಲಿ ಮೂವರನ್ನು ಸಿದ್ದಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೆಲಸದ ನಿಮಿತ್ತ ಮಹೇಶ್ ನಾಯ್ಕ್ ಬೆಂಗಳೂರಿನಲ್ಲಿ ವಾಸವಾಗಿದ್ದರು. ರಜೆ ದಿನಗಳಲ್ಲಿ ಸಿದ್ದಾಪುರಕ್ಕೆ ಹೋಗುತ್ತಿದ್ದರು. ಇಬ್ಬರು ಹೆಣ್ಣುಮಕ್ಕಳೊಂದಿಗೆ ಸುಚಿತ್ರಾ ಸಿದ್ದಾಪುರದಲ್ಲಿ ವಾಸವಾಗಿದ್ದಳು. ಸುಚಿತ್ರಾಳಿಗೆ ಇತ್ತೀಚೆಗೆ ಜ್ಯೋತಿಷಿ ಕಮಲಾಕರ್ ಭಟ್ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಸಲುಗೆ ಬೆಳೆದು ಕಮಲಾಕರ್ ಭಟ್ ಆಗಾಗ ಸುಚಿತ್ರಾ ಮನೆಗೆ ಬರುತ್ತಿದ್ದು, ಅಲ್ಲಿಯೇ ಉಳಿಯುತ್ತಿದ್ದನು. ಇದರಿಂದ ಕಸಿವಿಸಿಕೊಂಡಿದ್ದ ಹಿರಿಯ ಮಗಳು ತಾಯಿ ವರ್ತನೆಯನ್ನು ಪ್ರಶ್ನಿಸಿದ್ದಳು.

ಕೋಪಗೊಂಡ ಸುಚಿತ್ರಾ ಮಕ್ಕಳಿಗೆ ಹಿಂಸೆ ನೀಡಲು ಶುರು ಮಾಡಿದ್ದಳು. ಕೊನೆಗೆ ಹಿರಿಯ ಪುತ್ರಿ ಎಲ್ಲಾ ವಿಚಾರವನ್ನು ತಂದೆಗೆ ತಿಳಿಸಿದ್ದಾಳೆ. ಮಗಳಿಂದ ಪತ್ನಿಯ ಅಕ್ರಮ ಸಂಬAಧದ ವಿಷಯ ತಿಳಿದ ಮಹೇಶ್ ನಾಯ್ಕ್ ಊರಿಗೆ ತೆರಳಿದ್ದು ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದರು. ದೂರು ನೀಡಿ ಸಹೋದರ ವಸಂತ್ ಮನೆಗೆ ಮಹೇಶ್ ತೆರಳಿದ್ದರು. ಇನ್ನು ತಮ್ಮ ವಿರುದ್ಧ ದೂರು ನೀಡಿರುವ ವಿಚಾರ ತಿಳಿದ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಗುಂಪಿನೊOದಿಗೆ ವಸಂತ್ ಮನೆಗೆ ತಹೋಗಿ ಗಲಾಟೆ ಮಾಡಿದ್ದಾರೆ.

ನಂತರ ಮಹೇಶ್ ನಾಯ್ಕ್, ವಸಂತ್ ನಾಯ್ಕ್ ಮತ್ತು ಕುಮಾರ್ ಮೇಲೆ ಮನಬಂದOತೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವಸಂತ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಅನೈತಿಕ ಸಂಬAಧ, ಕೊಲೆ ಪ್ರಕರಣ ಸಂಬOಧ ಸುಚಿತ್ರಾ, ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಇತರರ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಇದೀಗ ಕಮಲಾಕರ್ ಭಟ್ ಸೇರಿ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.