March 21, 2026
WhatsApp Image 2026-02-03 at 10.52.34 AM (1)

ಬಂಟ್ವಾಳದ ಗೂಡಿನಬಳಿಯ ಬಳಕ ಎಂಬಲ್ಲಿ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.

ಚಾರ್ಲಿ ಡಿಸೋಜಾ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 9.30ಕ್ಕೆ  ಅಗ್ನಿ ಅನಾಹುತ ಸಂಭವಿಸಿದ್ದು, ಮನೆಯಲ್ಲಿ ಅನಾರೋಗ್ಯಪೀಡಿತ ಮನೆ ಯಜಮಾನ ವಿಜಯ್ ಮತ್ತು ಅವರ ಮಗಳು ಮಾತ್ರ ಇದ್ದರು.

ವಿಜಯ್ ಅವರ ಮಗಳು ಬಟ್ಟೆಯಂಗಡಿ ನಡೆಸುತ್ತಿದ್ದು, ಮನೆಯಲ್ಲಿ ಬಟ್ಟೆಗಳು ಇದ್ದವು. ಬೆಂಕಿ ಅವಘಡದ ವೇಳೆ ಲಕ್ಷಾಂತರ ರೂ ಮೌಲ್ಯದ ಬಟ್ಟೆ, ಗೃಹೋಪಯೋಗಿ ವಸ್ತುಗಳು ಸುಟ್ಟುಹೋಗಿವೆ. ಮನೆ ಯಜಮಾನ ವಿಜಯ್ ಅವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮಾಡಳಿತಾಧಿಕಾರಿ ಯಶ್ವಿತಾ ಮತ್ತು ಸಿಬ್ಬಂದಿ ಸದಾಶಿವ ಕೈಕಂಬ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.