March 21, 2026
WhatsApp Image 2026-02-03 at 9.30.29 AM

ಉಡುಪಿಯ ಮಲ್ಪೆ ಬೀಚ್ ನಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿ ಕಳೆದ 11ವರ್ಷಗಳಿಂದ ತಲೆಮರೆಸಿಕೊಂಡ ಇಬ್ಬರು ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿತರಾದ ಆಶಾ @ ಸುಮಿತ್ರ ಕೃಷ್ಣ ಹಾಗೂ ರೇಖಾ ದಾನಪ್ಪ ಬಂಧಿತರು.ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹೊಸ ಮನೆ ಎಂಬಲ್ಲಿ ಇವರನ್ನು ದಸ್ತಗಿರಿ  ಮಾಡಲಾಗಿದೆ.

ಬಂಧಿತರು ಮಲ್ಪೆ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರು.

ಇದೀಗ ಆರೋಪಿಗಳನ್ನು ಮಲ್ಪೆ ಠಾಣಾ ಸಿಬ್ಬಂದಿಗಳಾದ  ಸುರೇಶ್ ಕುಮಾರ್, ವಿಶ್ವನಾಥ್ ಮತ್ತು ಮಹಿಳಾ ಸಿಬ್ಬಂದಿ ಸಿಂಚನ ಅವರ ತಂಡ ಬಂಧಿಸಿ ನ್ಯಾಯಾಧೀಶರ ಮುಂದೆ  ಹಾಜರುಪಡಿಸಿದ್ದಾರೆ.

ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದು, ಮಂಗಳೂರು ಕಾರಾಗ್ರಹಕ್ಕೆ ಕಳುಹಿಸಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.