ಮೈಸೂರು : ಹುಷಾರ್.. ಬೆತ್ತಲೆ ಇಮೇಜ್ ಬಂದ್ರೆ ಡೇಂಜರ್, ಹಾಯ್ ಅಂದ್ರೂ ಡೇಂಜರ್, ಏಯ್ ಅಂದ್ರೂ ಡೇಂಜರ್. ಸ್ವೀಟಿ ಅಂತಾ ಭೇಟಿ ಮಾಡಿದ್ರೆ ಇನ್ನೂ ಡೇಂಜರ್.
ಹಣ ಕಿತ್ತು ಮಾನ ಹರಾಜಾಕ್ತಾರೆ ಈ ಖತರ್ನಾಕ್ ಲೇಡಿ. ಮೈಸೂರು ಪೊಲೀಸರು ಕಿಲಾಡಿ ಲೇಡಿಯನ್ನು ಅರೆಸ್ಟ್ ಮಾಡಿದ್ದಾರೆ. ಈಕೆ ಹೆಸರು ಸವಿತಾ ಅಲಿಯಾಸ್ ಮಂಜುಳಾ ಯಾದವ್. ಪಿರಿಯಾಪಟ್ಟಣದಿಂದ ಬಂದು ಮೈಸೂರಲ್ಲಿ ಸೆಟಲ್ ಆಗಿದ್ದಾರೆ. ಕಷ್ಟಕ್ಕೆ ಅಂತಾ ಕೆಲ ದಂಪತಿ ಬಳಿ ಹಣ ಪಡೆದಿದ್ದು, ಆನಂತರ ದಂಪತಿ ನಡುವೆ ಕಲಹ ತಂದಿಡ್ತಿದ್ದರು.
ಹಣ ಕೇಳಿದ್ರೆ ತನ್ನದೇ ನಗ್ನ ಪೋಟೋ ಕಳಿಸಿ ಬೆದರಿಕೆ ಹಾಕಿದ್ದಾರೆ.ಈಕೆಯ ಕಳ್ಳಾಟ ಗೊತ್ತಾಗಿ ಖುದ್ದು ಪತಿಯೇ ಚಾಕು ಇರಿದಿದ್ದನಂತೆ. ಆದ್ರೂ ಬುದ್ದಿ ಕಲಿಯದೇ ಬೆತ್ತಲೆ ಆಟ ಶುರು ಮಾಡಿದ್ದರು. ವಾಟ್ಸಾಪ್ ಮೂಲಕ ತನ್ನ ಅರೆ ನಗ್ನ ಪೋಟೋ ಸೆಂಡ್ ಮಾಡ್ತಿದ್ದರು. ವಿಡಿಯೋ ನೋಡಿ ಮೆಸೇಜ್ ಮಾಡಿದ್ರೆ ಕೇಸ್ ಬೆದರಿಕೆ ಹಾಕ್ತಿದ್ದರು. ಅಮಾಯಕರನ್ನು ಯಾಮಾರಿಸಿ ಲಕ್ಷ-ಲಕ್ಷ ಹಣ ಕೇಳ್ತಿದ್ದರು.
ಮೈಸೂರಿನಲ್ಲಿ ಪರಿಚಯಸ್ಥ ದಂಪತಿಗೆ ಯಾಮಾರಿಸಿದ್ದು, ವಿಜಯನಗರ 2ನೇ ಹಂತದಲ್ಲಿ ಈ ಹಿಂದೆ ಸ್ಪಾ ತೆರೆದಿದ್ದರು.ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ಶುರು ಮಾಡಿ ಸಿಕ್ಕಿಬಿದ್ದಿದ್ದು, ವಂಚನೆ ಸಂಬಂಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಸವಿತಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೊಬೈಲ್ ಚಾಟ್ಗೆ ಲೇಡಿ ಸಿಕ್ಕಿದ್ಲು ಅಂತಾ ಯಾಮಾರ್ಬೇಡಿ, ಚಾಟ್ ಹಿಂದೆ ಬಿದ್ರೆ ನೀವು ಬೆತ್ತಲಾಗೋದು ಗ್ಯಾರೆಂಟಿ.