
ಉಡುಪಿ: ಪ್ರಧಾನಿ ನರೇಂದ್ರ ಮೋದಿ ನ.28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದ್ದು, ಅವರು ಉಡುಪಿಗೆ ನಿಗದಿತ ಸಮಯಕ್ಕಿಂತ 40 ನಿಮಿಷ ಮುಂಚಿತವಾಗಿ ಆಗಮಿಸಲಿದ್ದಾರೆ.
ನರೇಂದ್ರ ಮೋದಿ ಬೆಳಗ್ಗೆ ೧೧.೦೫ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿ, ಅಲ್ಲಿಂದ ಆದಿಉಡುಪಿ ಹೆಲಿಪ್ಯಾಡ್‌ಗೆ ಬೆಳಗ್ಗೆ ೧೧.೩೫ಕ್ಕೆ ಬಂದು ಇಳಿದು, ೧೨ಗಂಟೆಗೆ ಮಠ ತಲುಪುವ ಬಗ್ಗೆ ಸಮಯ ನಿಗದಿಯಾಗಿತ್ತು. ಇದೀಗ ಅದರಲ್ಲಿ ಬದಲಾವಣೆಯಾಗಿ ಮೋದಿ ಬೆಳಗ್ಗೆ ೧೧ಗಂಟೆಗೆ ಆದಿಉಡುಪಿಗೆ ಆಗಮಿಸಿ ೧೧ಗಂಟೆಯಿAದ ೧೧.೩೦ರವರೆಗೆ ರೋಡ್ ಶೋ ನಡೆಸಲಿದ್ದಾರೆ. ಮಠದ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ ೧ಗಂಟೆಗೆ ಹೊರಡಲಿದ್ದಾರೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಪ್ರಧಾನಿ ಮೋದಿಯ ಭದ್ರತಾ ಪಡೆ ಮತ್ತು ರಾಜ್ಯ ಪೊಲೀಸರು ಮಾಕ್ ಡ್ರಿಲ್ ಮಾಡಿದ್ದಾರೆ. ದೆಹಲಿ ಸ್ಪೋಟದ ನಂತರ ಪ್ರಧಾನಿ ಮೋದಿಯ ಭದ್ರತಾ ವಿಧಾನವನ್ನು ಮತ್ತಷ್ಟು ಕಟ್ಟುನಿಟ್ಟು ಮಾಡಲಾಗಿದೆ. ಉಡುಪಿ ಪ್ರವಾಸದ ಮಾಕ್ ಡ್ರಿಲ್ ನಡೆಯುತ್ತಿದೆ. ಹೆಲಿಪ್ಯಾಡ್, ರೋಡ್ ಶೋ, ಕೃಷ್ಣಮಠ ಮತ್ತು ಸಮಾವೇಶ ಸ್ಥಳದ ಭೇಟಿಯ ರಿಹರ್ಸಲ್ ನಡೆಯುತ್ತಿದೆ. ಮೋದಿ ಸಾಗುವ ರೂಟ್ ನಲ್ಲಿ ಕಾರ್ಯಕ್ರಮ ನಡೆಯುವ ವೇದಿಕೆಯ ಬಗ್ಗೆ ಕೆಲ ಬದಲಾವಣೆಗಳನ್ನು ಎಸ್ಪಿಜಿ ಸೂಚಿಸಿದೆ.
ಸಾಂಸ್ಕೃತಿಕ ಕಾರ್ಯಕ್ರಮ, ಸಾರ್ವಜನಿಕರು ಜಮಾಯಿಸುವ ಪ್ರಮುಖ ಜಂಕ್ಷನ್ ನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.
