
ಪ್ರಧಾನಿ ನರೇಂದ್ರ ಮೋದಿ ಅವರು ನ. 28ರಂದು ಉಡುಪಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಸ್‌ಪಿಜಿ ತಂಡ ಉಡುಪಿಗೆ ಆಗಮಿಸಿದೆ.
ಸೋಮವಾರ ಉಡುಪಿಗೆ ಆಗಮಿಸಿರುವ ಎಸ್.ಪಿ.ಜಿ ತಂಡ ಇಂದು (ನ. 25) ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿದೆ. ಆದಿ ಉಡುಪಿಯ ಹೆಲಿಪ್ಯಾಡ್ ಗೆ ತೆರಳಿದ ಎಸ್.ಪಿ.ಜಿ ಹಾಗೂ ಎಎಸ್‌ಸಿ ತಂಡ ಭದ್ರತೆಯನ್ನು ಪರಿಶೀಲಿಸಿದೆ. ಬಳಿಕ ಮೋದಿ ಭಾಗಿಯಾಗಲಿರುವ ಕಾರ್ಯಕ್ರಮ ನಡೆಯುವ ಕೃಷ್ಣಮಠದ ರಾಜಾಂಗಣಕ್ಕೆ ತೆರಳಿದ ತಂಡ ಪೆಂಡಾಲ್ ಜಾಗದಲ್ಲಿ ತಪಾಸಣೆ ನಡೆಸಿದೆ. ಈ ವೇಳೆ ಭದ್ರತಾ ತಂಡಗಳ ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳ ಇದ್ದವು.
