December 5, 2025
WhatsApp Image 2025-11-23 at 12.10.14 PM

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಕಾರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಬಾಂಬರ್ ಉಮರ್ ಸಂಪರ್ಕದಲ್ಲಿದ್ದ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಆತ್ಮಾಹುತಿ ಬಾಂಬರ್ ಉಮರ್ ಸಂಪರ್ಕದಲ್ಲಿದ್ದ ತುಫೈಲ್ ನಿಯಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.ನವೆಂಬರ್ 10ರಂದು ಸಂಜೆ ದೆಹಲಿಯ ಕೆಂಪುಖೋಟೆಯ ಮೆಟ್ರೋ ನಿಲ್ದಾಣದ ಬಳಿ i20 ಕಾರು ಸ್ಫೋಟಗೊಂಡಿತ್ತು. ಆತ್ಮಾಹುತಿ ಬಾಂಬರ್ ಕಾರು ಸ್ಫೋಟಿಸಿದ್ದ. ಘಟನೆಯಲ್ಲಿ 15 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಕೃತ್ಯದ ಹಿಂದೆ ವೈಟ್ ಕಾಲರ್ ಉಗ್ರರ ಕೈವಾಡವಿರುದು ದೃಢಪಟ್ಟಿದೆ.

ಇದಕ್ಕೂ ಮುನ್ನ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಂಚುಕೋರ ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ನನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿ ಕಾರು ಸ್ಫೋಟದಲ್ಲಿ ಭಯೋತ್ಪಾದಕ ಉಮರ್ ಗೆ ಸಹಾಯ ಮಾಡಿದ ಸಕ್ರಿಯ ಸಹ-ಸಂಚುಕೋರ ಜಾಸಿರ್ ಬಿಲಾಲ್ ಅಲಿಯಾಸ್ ಡ್ಯಾನಿಶ್. ಜೈಶ್-ಎ-ಮೊಹಮ್ಮದ್ ಸಂಘಟನೆಯ ಆಶ್ರಯದಲ್ಲಿ ವೈದ್ಯರನ್ನು ಬ್ರೈನ್ ವಾಶ್ ಮಾಡಿದವನು ಈತ.

ಡ್ಯಾನಿಶ್.. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಖಾಜಿಗುಂಡ್ ನಿವಾಸಿ. ಇವನು ರಾಜಕೀಯ ವಿಜ್ಞಾನವನ್ನು ಅಧ್ಯಯನ ಮಾಡಿದ್ದಾನೆ. ಇವನ್ನು ಶ್ರೀನಗರದಲ್ಲಿ NIA ಅಧಿಕಾರಿಗಳು ಬಂಧಿಸಿದರು. ಇವನನ್ನು ಡ್ರೋನ್ ತಜ್ಞ ಎಂದು ಗುರುತಿಸಲಾಗಿದೆ. ಇವನು ಡ್ರೋನ್ಗಳ ಮೂಲಕ ಅತ್ಯಂತ ಶಕ್ತಿಶಾಲಿ ಬಾಂಬ್ಗಳನ್ನು ಸ್ಫೋಟಿಸಲು ಸಂಚು ರೂಪಿಸಿದ್ದ. ಡಾ. ಉಮರ್ ಜೊತೆಗೆ ಈ ಯೋಜನೆಯನ್ನು ಬರೆದಿದ್ದಾನೆ. ಡ್ಯಾನಿಶ್ ಭಯೋತ್ಪಾದಕ ಮಾಡ್ಯೂಲ್ ನಲ್ಲಿ ಸಂಚುಕೋರ ಕೂಡ. ಡ್ರೋನ್ಗಳು ಮತ್ತು ರಾಕೆಟ್ಗಳ ಮೂಲಕ ಶಕ್ತಿಶಾಲಿ ಬಾಂಬ್ಗಳನ್ನು ಹೇಗೆ ಸ್ಫೋಟಿಸಬೇಕೆಂದು ತಿಳಿದಿತ್ತು. ಅದಕ್ಕೆ ಡ್ಯಾನಿಶ್ ತಾಂತ್ರಿಕ ನೆರವು ನೀಡಿದ್ದ. ಡ್ರೋನ್ಗಳು ಭಾರೀ ಬಾಂಬ್ಗಳನ್ನು ಹೊತ್ತೊಯ್ಯಬಲ್ಲ ದೊಡ್ಡ ಬ್ಯಾಟರಿಗಳನ್ನು ಹೊಂದಿವೆ ಎಂದು ತನಿಖಾಧಿಕಾರಿಗಳು ಈಗಾಗಲೇ ಕಂಡುಕೊಂಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.