
ಮಣಿಪಾಲ: ಹಿರಿಯಡ್ಕ ಸರಕಾರಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತಿದ್ದ ವಿದ್ಯಾರ್ಥಿಯೊಬ್ಬ ನಿನ್ನೆ ಅಪರಾಹ್ನ ಕಾಲೇಜಿನಿಂದ ಮನೆಗೆ ಬಂದು ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಅಲೆವೂರು ಗ್ರಾಮದ ಗುರುಪ್ಪ ಮೇಟಿ ಎಂಬವರ ಮಗನಾದ ಮಂಜುನಾಥ ಮೇಟಿ (17) ಎಂದು ಗುರುತಿಸಲಾಗಿದೆ. ಅತಿಯಾದ ಮೊಬೈಲ್ ಬಳಕೆ ಮಾಡುತಿದ್ದ ಮಂಜುನಾಥ ಯಾವಾಗಲೂ ಒಂಟಿಯಾ ಗಿದ್ದು, ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿರುವ ಮಣಿಪಾಲ ಪೊಲೀಸರು ತಿಳಿಸಿದ್ದಾರೆ.
