
ವಿಟ್ಲ: ರಾಜ್ಯದಾದ್ಯಂತ ಸುದ್ದಿಯಾಗಿದ್ದ ವಿಟ್ಲದ ಹಾನಿ ಟ್ರ್ಯಾಪ್ ಪ್ರಕರಣದ ಮೂವರು ಆರೋಪಿಗಳಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕೇರಳ ಮೂಲದ ನಿವಾಸಿ ಅರಬ್ ರಾಷ್ಟ್ರದಲ್ಲಿ ಉದ್ಯೋಗಿಯಾಗಿದ್ದ ಅಶ್ರಫ್ ಎಂಬಾತನ ಹನಿ ಟ್ರ್ಯಾಪ್ ನಡೆಸಿ 45ಲಕ್ಷ ಸುಲಿಗೆ ಮಾಡಿದ್ದರೆಂಬ ಆರೋಪ ಮೇಲೆ ಕಡಂಬು ಬಶೀರ್, ಮಾಣಿ ಸೆಫಿಯಾ, ಸರಪುದ್ಧೀನ್ ಸಹಿತ ಆರು ಜನರ ವಿರುದ್ಧ ವಿಟ್ಲ ಠಾಣೆಯಲ್ಲಿ ಅ ಕ್ರಂ:145/2025ರಂತೆ ಪ್ರಕರಣ ದಾಖಲಾಗಿತ್ತು.
ಹನಿ ಟ್ರ್ಯಾಪ್ ಪ್ರಕರಣದ ಆರೋಪಿಗಳಾದ ಕಡಂಬು ಬಶೀರ್, ಮಾಣಿ ಸೆಫಿಯಾ, ಸರಪುದ್ಧೀನ್‌ಗೆ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ಷರತ್ತು ಬದ್ಧ ನಿರೀಕ್ಷಣಾ ಜಾಮಿನು ಮಂಜೂರು ಮಾಡಿದೆ. ಆರೋಪಿ ಪರ ವಕೀಲ ಚೇತನಾ ಶೆಟ್ಟಿ ದಂಡೆ ಹಾಗೂ ಹನಿ ಟ್ರ್ಯಾಪ್ ಸಂತ್ರಸ್ತ ಅಶ್ರಫ್ ಪರ ಖಾಸಗಿ ವಕೀಲರು ವಾದ ಮಂಡಿಸಿದರು.
ನ್ಯಾಯಾಲಯ ನೀಡಿದ ನಿರೀಕ್ಷಣಾ ಜಾಮೀನಿನಿಂದಾಗಿ ಹನಿ ಟ್ರ್ಯಾಪ್ ಪ್ರಕರಣದ ಆರೋಪಿಗಳಿಗೆ ಬಂಧನ ಭೀತಿಯಿಂದ ಪಾರಾಗಿ ನಿಟ್ಟುಸಿರು ಬಿಟ್ಟಂತಾಗಿದೆ.
