
ಟೈಗರ್ ಫೆಂಡ್ಸ್ ಉಡುಪಿ ಇದರ ವತಿಯಿಂದ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಾಲ್ಕನೇ ವರ್ಷದ ಆಹ್ವಾನಿತ ತಂಡಗಳ ಸಾಂಪ್ರದಾಯಿಕ ಹುಲಿವೇಷ ಕುಣಿತ ಸ್ಪರ್ಧೆ ಹಾಗೂ ಪ್ರದರ್ಶನ ” ಅಬ್ಬರದ ಉಡುಪಿ ಪಿಲಿ ನಲಿಕೆ ” ಕಾರ್ಯಕ್ರಮವು ಸೆ. 14ರಂದು ಸಂಜೆ 4.30ಕ್ಕೆ ಕುಂಜಿಬೆಟ್ಟು ಮೀನು ಮಾರುಕಟ್ಟೆ ಬಳಿಯ ವೇದಿಕೆಯಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಶಶಿರಾಜ್ ಕುಂದರ್ ತಿಳಿಸಿದರು.
ಸೆ. 14ರಂದು ಬೆಳಗ್ಗೆ 9.30ಕ್ಕೆ ಮುದ್ದು ಕೃಷ್ಣ ಸ್ಪರ್ಧೆ ನಡೆಯಲಿದೆ. 1ರಿಂದ 3 ವರ್ಷದೊಳಗಿನ ಮಕ್ಕಳು ಹಾಗೂ 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಗೌರವಾಧ್ಯಕ್ಷ ಕೆ. ಹರೀಶ್ ಪೂಜಾರಿ, ಹರೀಶ್ ಕುಮಾರ್, ಭೋಜ ಶೇರಿಗಾರ್ ಉಪಸ್ಥಿತರಿದ್ದರು.
