
ಕಾರ್ಕಳ: ಚಲಿಸುತ್ತಿರುವಾಗಲೇ ಮಾರುತಿ 800 ಕಾರು ಹೊತ್ತಿ ಉರಿದ ಘಟನೆ ಸಾಣೂರು ಪೆಟ್ರೋಲ್ ಬಂಕ್ ಎದುರು ರಸ್ತೆಯಲ್ಲಿ ನಡೆದಿದೆ.
ಬಂಗ್ಲೆಗುಡ್ಡೆ ನಿವಾಸಿಯೊಬ್ಬರು ಈ ಹಳೆಯ ಕಾರನ್ನು ಬಳಸುತ್ತಿದ್ದರು. ಇಂಧನ ಟ್ಯಾಂಕಿನಿಂದ ಪೆಟ್ರೋಲ್ ಸೋರಿಕೆ ಆರಂಭವಾಗಿದ್ದು ಅದು ಅವರ ಗಮನಕ್ಕೆ ಬಂದಿರಲಿಲ್ಲಿ. ಸಾಣೂರಿಗೆ ತಲುಪಿದಾಗಿ ಎಂಜಿನಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಸೋರುತ್ತಿದ್ದ ಪೆಟ್ರೋಲ್‌ಗೆ ಬೆಂಕಿ ತಗಲಿದೆ. ತತ್‌ಕ್ಷಣವೇ ಅವರು ಕಾರಿನಿಂದ ಇಳಿದು ಪ್ರಣಾಪಾಯದಿಂದ ಪಾರಾಗಿದ್ದಾರೆ. ಕಾರು ಬೆಂಕಿಗಾಹುತಿಯಾಗಿದೆ.
ಮಾಹಿತಿ ತಿಳಿದ ಕೂಡಲೆ ಅಗ್ನಿಶಾಮಕ ದಳದ ಸಿಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಪ್ರಮುಖರಾದ ಅಚ್ಯುತ ಕರ್ಕೇರ, ಹರಿಪ್ರಸಾದ್, ಜಯ ಮೂಲ್ಯ, ದಿನೇಶ್ ಕಾರ್ಯಾಚರಣೆ ನಡೆಸಿದರು.
