
ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿ, ಚಾರ್ಟಡ್ ಅಕೌಂಟೆಂಟ್ ಗಣೇಶ್ ಜೋಶಿ ಅವರ ಪುತ್ರಿ, ಮಂಗಳೂರಿನಲ್ಲಿ ಖಾಸಗಿ ಪಶು ವೈದ್ಯೆಯಾಗಿದ್ದ ಡಾ. ಕೀರ್ತನಾ ಜೋಶಿ (27) ಸೋಮವಾರ ತಡರಾತ್ರಿ ಮಂಗಳೂರಿನ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಡಾ. ಕೀರ್ತನಾ ಅವರು ಪಶು ವೈದ್ಯಕೀಯದಲ್ಲಿ ಎಂ.ಡಿ. ವಿದ್ಯಾಭ್ಯಾಸ ಪೂರೈಸಿದ್ದು, ಪುತ್ತೂರು, ಕೊಯಿಲ ಹಾಗೂ ಮಂಗಳೂರಿನಲ್ಲಿ ಖಾಸಗಿ ಪ್ರಾಕ್ಟೀಸ್ ನಡೆಸುತ್ತಿದ್ದರು.
ಮೃತರು ತಂದೆ ಗಣೇಶ್ ಜೋಶಿ, ತಾಯಿ ವೀಣಾ ಜೋಶಿ ಹಾಗೂ ಸಹೋದರಿ ಡಾ. ಮೇಘನಾ ಜೋಶಿ ಅವರನ್ನು ಅಗಲಿದ್ದಾರೆ.
