

ಉಡುಪಿ: ಕಾರೊಂದು ಚಲಿಸುತ್ತಿದ್ದಾಗ ಇದ್ದಕಿದ್ದಂತೆ ಹೊಂಡಕ್ಕೆ ಬಿದ್ದ ಘಟನೆ ಮಣಿಪಾಲದ ಪಂಪ್ ಹೌಸ್ ಬಳಿ ನಡೆದಿದೆ.
ನಗರಸಭೆಗೆ ಸೇರಿದ ಕುಡಿಯುವ ನೀರಿನ ಪಂಪ್ ಹೌಸ್ ಬಳಿ ಇತ್ತೀಚೆಗೆ ಅಪಘಾತ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ಮತ್ತೊಂದು ಕಾರು ಅಪಘಾತವಾಗಿ ದುರ್ಘಟನೆ ನಡೆದಿದೆ.
ಕಾರಿನಲ್ಲಿದ್ದ ನಾಲ್ಕು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೊಂಡಕ್ಕೆ ಬಿದ್ದ ಕಾರನ್ನು ತೆಗೆಯಲು ಪೊಲೀಸರು ಸಹಕರಿಸಿದ್ದಾರೆ.