

ತಿನ್ನಲು ರುಚಿಕರವಾಗಿರುವ ಪರಾಠ ಅನೇಕರ ಫೇವರಿಟ್ ತಿಂಡಿ. ಅದರ ಪರಿಮಳ, ನಾಲಿಗೆಯಲ್ಲಿ ನೀರೂರಿಸುವ ರುಚಿಗೆ ಒಂದರ ಬದಲು ಎರಡು ತಿಂತಾರೆ. ಆದರೆ ಪರಾಠವನ್ನು ಇಷ್ಟಪಡುವವರು ಕೂಡ ತೂಕ ಹೆಚ್ಚಾಗುತ್ತೆ ಅನ್ನೋ ಕಾರಣಕ್ಕೆ ಅನೇಕರು ಅದನ್ನು ದೂರ ತಳ್ಳುತ್ತಾರೆ. ಆದರೆ ಸರಿಯಾದ ವಿಧಾನದಲ್ಲಿ ಮಾಡಿದರೆ ಪರಾಠ ಕೂಡ ತೂಕ ಇಳಿಕೆಯನ್ನು ಬೆಂಬಲಿಸಬಹುದು. ಅದು ಹೇಗೆ ಅನ್ನೋದನ್ನು ಇಲ್ಲಿ ವಿವರಿಸಲಾಗಿದೆ. ಈ ಮೂರು ತಂತ್ರಗಳನ್ನು ಅನುಸರಿಸಿದರೆ ಪರಾಠ ತಿಂದರೂ ನೀವು ತೂಕ ಏರಬಹುದು ಅನ್ನೋ ಚಿಂತೆ ಮಾಡಬೇಕಾಗಿಲ್ಲ!
ಪರಾಠಗಳನ್ನು ತೂಕ ನಷ್ಟಕ್ಕೆ ಸ್ನೇಹಿಯಾಗಿ ಮಾಡಲು ಸುಲಭವಾದ ಮಾರ್ಗವೆಂದರೆ ಮೈದಾದಂತಹ ಸಂಸ್ಕರಿಸಿದ ಬಿಳಿ ಹಿಟ್ಟನ್ನು ಬಳಸದೇ ಇರುವುದು. ಇದಕ್ಕೆ ಬದಲಾಗಿ ನೀವು ಸಂಪೂರ್ಣ ಗೋಧಿ ಹಿಟ್ಟು, ಓಟ್ಸ್, ಬಾದಾಮಿ ಅಥವಾ ಇತರ ಆರೋಗ್ಯಕರ ಹಿಟ್ಟನ್ನು ಆಯ್ಕೆ ಮಾಡಿಕೊಳ್ಳಿ.