

ಮಂಗಳೂರು: ಜಾಮೀನು ಪಡೆದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ 8ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ಬಾಳುಪೇಟೆ ನಿವಾಸಿ ಕಿಶೋರ್ ಶೆಟ್ಟಿ ಬಂಧಿತ ಆರೋಪಿ.
ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಆರೋಪಿ ಕಿಶೋರ್ ಶೆಟ್ಟಿ ಮೇಲೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ಜಾಮೀನು ಪಡೆದು, ಆ ಬಳಿಕ 8 ವರ್ಷಗಳಿಂದ ನ್ಯಾಯಲಯಕ್ಕೆ ಹಾಜರಾಗದೆ ತಲೆ ಮರಿಸಿಕೊಂಡಿದ್ದಾನೆ.
ಈ ಪ್ರಕರಣವನ್ನು ನ್ಯಾಯಲಯ LPC ಪ್ರಕರಣವೆಂದು ಪರಿಗಣಿಸಿತ್ತು. ಅದರಂತೆ ಆರೂಪಿಯ ಪತ್ತೆಯ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಎಎಸ್ಐ ಗಂಗಾಧರ ಎನ್., ಹೆಚ್.ಸಿ.ಚಂದ್ರಹಾಸ್ ಸನೀಲ್ & ಹೆಚ್ ಸಿ ಪುರುಷೊತ್ತಮರವರ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ದಸ್ತಗಿರಿ ಮಾಡಿ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.