

ಮಲ್ಪೆ: ಬೋಟ್ ನಿಂದ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮಲ್ಪೆ ಸಮುದ್ರದಲ್ಲಿ ಸಂಭವಿಸಿದೆ. ಮೃತರನ್ನು ಕುಮುಟಾದ ಶಿವಾನಂದ ನಾರಾಯಣ ಹರಿಕಾಂತ(47) ಎಂದು ಗುರುತಿಸಲಾಗಿದೆ.
ಇವರು ರಾತ್ರಿ ವೇಳೆ ಸಮುದ್ರಕ್ಕೆ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದು, ನಸುಕಿನ ವೇಳೆ 3:30ರ ಸುಮಾರಿಗೆ ಮೀನುಗಾರಿಕೆ ಬಲೆಯನ್ನು ಎಳೆಯುವಾಗ ಆಕಸ್ಮಿಕವಾಗಿ ಸಮುದ್ರದ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ