ಹೆಬ್ರಿ: ಸಾರ್ವಜನಿಕ ಸ್ಥಳದಲ್ಲಿ 4-5 ಜನರು ಪರಸ್ಪರ ಹೊಡೆದಾಡಿದ್ದು ಐವರನ್ನು ಹೆಬ್ರಿ ಪೊಲೀಸರು ಬಂಧಿಸಿದ ಘಟನೆ ಹೆಬ್ರಿ-ಕಾರ್ಕಳ ಮುಖ್ಯ ರಸ್ತೆಯ ಶಾರದಾ ಜನರಲ್ ಸ್ಟೋರ್ ಬಳಿ ನಡೆದಿದೆ.
ಬಂಧಿತರನ್ನು ಶಂಭು, ಧ್ರುವರಾಜ್,ಅರುಣ್ ಕುಮಾರ್, ಅಭಿಷೇಕ್ ಮತ್ತು ರಾಹುಲ್ ಎಂದು ಗುರುತಿಸಲಾಗಿದೆ.
ಶಂಭು, ಧ್ರುವರಾಜ್,ಅರುಣ್ ಕುಮಾರ್, ಅಭಿಷೇಕ್ ಮತ್ತು ರಾಹುಲ್ ಎಂಬವರು ಜೋರಾಗಿ ಬೊಬ್ಬೆ ಹಾಕುತ್ತಾ ಬೈದಾಡಿಕೊಂಡು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನೀರೀಕ್ಷಕ ಮಹೇಶ್ ಟಿ ಎಮ್ ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದ ಐವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.