
ವಿಟ್ಲ : ಬೋಳಂತೂರು ಸಮೀಪದ ನಾರ್ಶದ ಉದ್ಯಮಿ ಸುಲೈಮಾನ್ ಹಾಜಿ ಅವರ ಮನೆಗೆ ನಕಲಿ ಇಡಿ ಅಧಿಕಾರಿಗಳ ದರೋಡೆ ಪ್ರಕರಣದಲ್ಲಿ ಮನೆಯವರಿಂದ ಆರೋಪಿಗಳು ವಶಪಡಿಸಿಕೊಂಡಿದ್ದ ಮೊಬೈಲ್ ಗಳು ಮನೆಯಲ್ಲೇ ಪತ್ತೆಯಾಗಿದೆ.ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ಬಂದವರು, ಮೊದಲು ಕುಟುಂಬ ಸದಸ್ಯರ 5 ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಅವರು ವಾಪಾಸ್ ಹೋಗುವಾಗ ಮೊಬೈಲ್‌ಗಳನ್ನು ಅವರ ಜತೆಯಲ್ಲೇ ತೆಗೆದುಕೊಂಡು ಹೋಗಿರಬಹುದು ಎಂದು ಕುಟುಂಬ ಸದಸ್ಯರು ಭಾವಿಸಿದ್ದರು. ಆದರೆ, ಮೊಬೈಲ್‌ಗಳು ಮೂರನೆಯ ಮಹಡಿಯಲ್ಲಿ ಪತ್ತೆಯಾಗಿವೆ. ಅದೇ ಕೋಣೆಯಲ್ಲಿ ಮೊಬೈಲ್‌ನಿಂದ ಸಿಮ್ ತೆಗೆದು ತುಂಡರಿಸಿ ಅಲ್ಲೇ ಎಸೆದಿದ್ದಾರೆ. ಸುಲೈಮಾನ್ ಹಾಜಿ ಅವರು ಜಾಗ ಮಾರಾಟದಿಂದ ಪಡೆದ ಹಣದ ಬಗ್ಗೆ ಯಾರಿಗೆಲ್ಲಾ ತಿಳಿದಿತ್ತು ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜಾಗ ಮಾರಾಟದಿಂದ ಬಂದ ಹಣದ ಬಗ್ಗೆ ನಿಖರ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು.
