December 6, 2025
WhatsApp Image 2024-12-21 at 12.17.43 PM

ಉಡುಪಿ : ಪರಶುರಾಮ ಫ್ರೆಂಡ್ಸ್ ಮಲ್ಪೆ ಇದರ ವತಿಯಿಂದ ಪ್ರವಾಸಿಗರನ್ನು ಸೆಳೆಯಲು “ಮಲ್ಪೆ ಫುಡ್ ಫೆಸ್ಟ್” ಎಂಬ ಆಹಾರೋತ್ಸವ ಕಾರ್ಯಕ್ರಮವನ್ನು ಡಿ.27 ರಿಂದ 31 ರವರೆಗೆ ಮಲ್ಪೆ ಕಡಲ ಕಿನಾರೆಯಲ್ಲಿ ಆಯೋಜಿಸಲಾಗಿದೆ.

ಸ್ಟಾಲ್ ಗಳಿಗೆ ಆಹ್ವಾನ: ಕಡಲ ಕಿನಾರೆಯಲ್ಲಿ ಐದು ದಿನಗಳ ಈ ಕಾರ್ಯಕ್ರಮಕ್ಕೆ ವಿವಿಧ  ಸ್ಟಾಲ್ ಗಳನ್ನು ಆಹ್ವಾನಿಸಲಾಗಿದೆ. ಪ್ರಮುಖವಾಗಿ ಮೀನಿನ ಫ್ರೈ,ತಾಜಾ ಮೀನುಗಳ ಮಾರಾಟ, ಚಿಕನ್ ತಂದೂರಿ, ಶೋರ್ಮ, ಚೈನೀಸ್ ಸಹಿತ ಎಲ್ಲ ಬಗೆಯ ಖಾದ್ಯಗಳನ್ನು ತಯಾರಿಸುವ ಹಾಗೂ ಕರಕುಶಲ, ಗುಡಿ ಕೈಗಾರಿಕೆ, ಕೈಮಗ್ಗದ ಉತ್ಪನ್ನ, ಫ್ಯಾನ್ಸಿ, ಐಸ್ ಕ್ರೀಮ್ ಮಾರಾಟ ಮಳಿಗೆ ಸಹಿತ ಹಲವಾರು ಸ್ಟಾಲ್ ಗಳಿಗೆ ಆಹ್ವಾನಿಸಲಾಗಿದೆ. ಈಗಾಗಲೇ ಹಲವರು ಸ್ಟಾಲ್ ಗಳು ಬುಕ್ಕಿಂಗ್ ಆಗಿದ್ದು, ಕೆಲವೇ ಸ್ಟಾಲ್ ಗಳು ಬಾಕಿ ಉಳಿದಿವೆ.

ಮಲ್ಪೆಯಲ್ಲಿ ಇದೇ ಮೊದಲ ಬಾರಿಗೆ ಡಿ. 31 ರ ರಾತ್ರಿ ಲ್ಯಾಟಿನ್ ಫೆಸ್ಟಿವಲ್ (ಲ್ಯಾಟೀನ್ ಹಬ್ಬ)ವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಸಾವಿರಕ್ಕೂ ಹೆಚ್ಚು ಲ್ಯಾಟಿನ್ಗಳನ್ನು ಆಕಾಶಕ್ಕೆ ಹಾರಿ ಬಿಡಲಾಗುವುದು. ಮಾತ್ರವಲ್ಲದೆ ಪ್ರತಿನಿತ್ಯ ಲೈವ್ ಮ್ಯೂಸಿಕ್, ಡ್ಯಾನ್ಸ್, ಸುಡುಮದ್ದು ಪ್ರದರ್ಶನಗೊಳ್ಳಲಿದೆ. ಇಷ್ಟು ಮಾತ್ರವಲ್ಲದೆ ಚೀನಾದ ಬೃಹತ್ ಲಯನ್ ವಿಶೇಷ ಆಕರ್ಷಣೀಯ ಆಗಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9036638898, 8970305000 ಅಥವಾ  ದೂ. ಸಂಖ್ಯೆಯನ್ನು ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ

About The Author

Leave a Reply

Your email address will not be published. Required fields are marked *

You cannot copy content of this page.