ಉಡುಪಿ : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನಗರಸಭೆಗೆ ಸೇರಿದ ನೀರಿನ ಪಂಪ್ ಹೌಸ್ ಗೆ ಡಿಕ್ಕಿ ಹೊಡೆದ ಘಟನೆ ಮಣಿಪಾಲದ ಈಶ್ವರ ನಗರದಲ್ಲಿ ನಡೆದಿದೆ.
ಮಣಿಪಾಲದಿಂದ ಶಿವಮೊಗ್ಗ ಕಡೆಗೆ ಹೊರಟ ಮಾರುತಿ ಬೆಲೆನನೋ ಕಾರು ಇದಾಗಿದ್ದು ಐವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಮಣಿಪಾಲದಿಂದ ಈಶ್ವರ ನಗರ ತನಕ ಕಾಂಕ್ರೀಟ್ ರಸ್ತೆ ಇದ್ದು ನಂತರ ಮಣ್ಣಿನ ರಸ್ತೆ ಗೋಚರಿಸುತ್ತದೆ ಚಾಲಕರಿಗೆ ನಂತರ ದಿಕ್ಕು ತಪ್ಪಿಸುವ ಪಾಯಿಂಟ್ ಇದಾಗಿದ್ದು. ನಗರಸಭೆ ಪಂಪ್ ಹೌಸಿಗೆ ಯಾವುದೇ ಭದ್ರತೆ ಒದಗಿಸಿಲ್ಲ. ಗೋಡೆ ಕೂಡ ನಿರ್ಮಿಸಿ ಇಲ್ಲ. ರಾಷ್ಟ್ರೀಯ ಹೆದ್ದಾರಿಗೆ ಬಿಟ್ಟುಕೊಟ್ಟ ಜಾಗ ನಂತರ ಯಾವುದೇ ಬೇಲಿ ನಿರ್ಮಿಸಿ ಇಲ್ಲ. ಸುರಕ್ಷಿತ ಕ್ರಮ ಕೈಗೊಂಡಿಲ್ಲ. ಒಟ್ಟಿನಲ್ಲಿ ಪದೇಪದೇ ಈ ಜಾಗದಲ್ಲಿ ವಾಹನ ಚಾಲಕರು ಅಪಘಾತಕ್ಕೆ ಇಡಾಗುತ್ತಿರುವುದು ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ. ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳ ಬೇಜವಾಬ್ದಾರಿ ಯಾಗಿದೆ.