ಹುಬ್ಬಳ್ಳಿ: 6ನೇ ತರಗತಿಯ ಬಾಲಕನೊಬ್ಬ ಶಾಲೆಯಲ್ಲಿಯೇ ಕುಸಿದುಬಿದ್ದಿದ್ದು, ಹೃದಯಾಘಾದಿಂದ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಕಲಘಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಮಕ್ತುಮ್ ಮಹ್ಮದ್ ರಫಿ ಮನಿಯಾರ್ (13) ಮೃತ ಬಾಲಕನಾಗಿದ್ದು, ಆತ ಕೆಲ ವರ್ಷಗಳಿಂದಲೇ ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.
ಶಾಲೆಯಲ್ಲಿ ಬಾಲಕ ಕುಸಿದುಬಿದ್ದ ತಕ್ಷಣವೇ ಆತನನ್ನು ಶಿಕ್ಷಕರು ಕಲಘಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.