March 20, 2026
WhatsApp Image 2024-10-20 at 9.13.48 AM

ಭಟ್ಕಳ: ಬಸ್‌ ಒಂದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಒಂದು ಪಲ್ಟಿಯಾದ ಘಟನೆ ಉತ್ತರ ಕನ್ನಡ ಭಟ್ಕಳದಲ್ಲಿ   ನಡೆದಿದೆ.

ಮಂಗಳೂರಿನಿಂದ ಹರ್ಯಾಣ ರಾಜ್ಯಕ್ಕೆ ಗೇರು ಎಣ್ಣೆ ಸಾಗಾಟ ಮಾಡುತ್ತಿದ್ದ ಈ  ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಾ.ಹೆ.66 ಭಟ್ಕಳ ಬೈಪಾಸ್ ಬಳಿ  ಪಲ್ಟಿಯಾಗಿದೆ.  ಘಟನೆಯಲ್ಲಿ ಟ್ಯಾಂಕರ್ ಚಾಲಕ ರಾಜಸ್ಥಾನ ಮೂಲದ ಮದನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಾಗಾರಿಯಿಂದಾಗಿ ಇಂತಹ ರಸ್ತೆ ಅಪಘಾತಗಳು ದಿನ ನಿತ್ಯ ನಡೆಯುತ್ತಲೆ ಇದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರವರ್ಗದಿಂದ ಬೈಪಾಸ್ ಹೋಗುವ ರಸ್ತೆ ಮದ್ಯೆ ಹಂಪ್ಸ್ (ರಸ್ತೆ ತಡೆ) ಹಾಕಲಾಗಿದ್ದು ಟ್ಯಾಂಕರ್ ಮುಂದೆ ಸಾಗುತ್ತಿದ್ದ ಬಸ್ ಚಾಲಕ ಅಕಸ್ಮಿಕವಾಗಿ ಬ್ರೇಕ್ ಹಾಕಿದ್ದು ಗಲಿಬಿಲಿಗೊಂಡ ಟ್ಯಾಂಕರ್ ಚಾಲಕ ಬಸ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿರುವ ಸಣ್ಣ ಪ್ರಪಾತಕ್ಕೆ ಎಡವಿದ್ದಾನೆ ಇದರಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

About The Author

Leave a Reply

Your email address will not be published. Required fields are marked *

You cannot copy content of this page.