22 ಲಕ್ಷ BPL, ಅಂತ್ಯೋದಯ ಕಾರ್ಡ್‌ ರದ್ದು..! ದಕ್ಷಿಣ ಕನ್ನಡ 1.11 ಲಕ್ಷ, ಉಡುಪಿ 80 ಸಾವಿರ ಕಾರ್ಡ್‌ ರದ್ದು

ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗದೇ ಸಂಕಷ್ಟ ಎದುರಿಸುತ್ತಿರುವ ಹೊತ್ತಲ್ಲೇ ಬಿಪಿಎಲ್‌ ಕಾರ್ಡುದಾರರಿಗೆ ಮತ್ತೊಂದು ಶಾಕ್‌ ಸಿಕ್ಕಿದೆ. ರಾಜ್ಯದಲ್ಲಿ ಬರೋಬ್ಬರಿ 22 ಲಕ್ಷ ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡುಗಳು ರದ್ದಾಗಲಿವೆ.

ಈಗಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನರ್ಹ ಪಡಿತರ ಕಾರ್ಡುದಾರರನ್ನು ಪತ್ತೆ ಮಾಡಿದೆ. ಹಾಗಾದ್ರೆ ಯಾವ ಜಿಲ್ಲೆಯಿಂದ ಎಷ್ಟು ಕಾರ್ಡುಗಳು ರದ್ದಾಗಲಿವೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ಸರಕಾರದ ಆದೇಶದ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅನರ್ಹ ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡುದಾರರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದೆ. ಈಗಾಗಲೇ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಅನರ್ಹ ಪಡಿತರ ಕಾರ್ಡುದಾರರನ್ನು ಪತ್ತೆ ಮಾಡಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿಯೇ ಅತೀ ಹೆಚ್ಚು ಅನರ್ಹ ಬಿಪಿಎಲ್‌ ಕಾರ್ಡುಗಳು ಪತ್ತೆಯಾಗಿದೆ.

ಬೆಂಗಳೂರಿನಲ್ಲಿ 2.54 ಲಕ್ಷ, ಕಲಬುರಗಿಯಲ್ಲಿ 1.57 ಲಕ್ಷ, ಮೈಸೂರಿನಲ್ಲಿ 1.41 ಲಕ್ಷ, ಬೀದರ್ ನಲ್ಲಿ 1.30 ಲಕ್ಷ, ಬೆಳಗಾವಿಯಲ್ಲಿ 1.27 ಲಕ್ಷ, ಕೋಲಾರದಲ್ಲಿ 1.25 ಲಕ್ಷ, ದಕ್ಷಿಣ ಕನ್ನಡ 1.11 ಲಕ್ಷ, ಶಿವಮೊಗ್ಗ1.08 ಲಕ್ಷ, ಚಿಕ್ಕಮಗಳೂರು 1.05 ಲಕ್ಷ, ದಾವಣಗೆರೆ 85 ಸಾವಿರ, ಉಡುಪಿ 80 ಸಾವಿರ, ಬಾಗಲಕೋಟೆ 74 ಲಕ್ಷ, ವಿಜಯಪುರ 62 ಸಾವಿರ, ರಾಯಚೂರು 59 ಸಾವಿರ, ಹಾಸನ 58 ಸಾವಿರ, ಧಾರವಾಡ 55 ಸಾವಿರ, ಮಂಡ್ಯ 51 ೫೧ ಸಾವಿರ, ತುಮಕೂರು 51 ಸಾವಿರ, ಬೆಂಗಳೂರು ಗ್ರಾಮಾಂತರ 50 ಸಾವಿರ, ಹಾವೇರಿ 49 ಸಾವಿರ, ಉತ್ತರ ಕನ್ನಡ49 ಸಾವಿರ, ಚಿತ್ರದುರ್ಗ 43 ಸಾವಿರ, ಕೊಡಗು 32 ಸಾವಿರ, ಬಳ್ಳಾರಿ 31 ಸಾವಿರ, ಗದಗ 29 ಸಾವಿರ, ರಾಮನಗರ 26 ಸಾವಿರ, ವಿಜಯನಗರ 25 ಸಾವಿರ, ಚಾಮರಾಜನಗರ 20 ಸಾವಿರ, ಯಾದಗಿರಿ 19 ಸಾವಿರ, ಕೊಪ್ಪಳ 18 ಸಾವಿರ, ಚಿಕ್ಕಬಳ್ಳಾಪುರ 18 ಸಾವಿರಕ್ಕೂ ಅಧಿಕ ಕಾರ್ಡುಗಳು ರದ್ದಾಗಲಿವೆ.

Check Also

ಸ್ವಂತ ಮನೆ ಕಟ್ಟುವವರಿಗೆ ಶುಭ ಸುದ್ದಿ – ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೋಂದಣಿ ಆರಂಭ – ಅರ್ಹತೆ ಹಾಗೂ ಅರ್ಜಿ ಸಲ್ಲಿಕೆಯ ವಿವರ

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) 2.0 ಮೋದಿ ನೇತ್ರತ್ವದ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದು. ಈ ಯೋಜನೆಯಡಿ …

Leave a Reply

Your email address will not be published. Required fields are marked *

You cannot copy content of this page.