ಬೆಳ್ತಂಗಡಿ: ದನಗಳ ಅಕ್ರಮ ಸಾಗಾಟ ಪತ್ತೆ- ನಾಲ್ವರ ಬಂಧನ

ಬೆಳ್ತಂಗಡಿ: ಅಕ್ರಮವಾಗಿ ಪಿಕಪ್‌ ವಾಹನದಲ್ಲಿ ಗೋ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ಬೆಳ್ತಂಗಡಿ ತಾಲೂಕು ಮಲವಂತಿಕೆ ಗ್ರಾಮದ ಏಳನೀರು ಎಂಬಲ್ಲಿ ನಡೆದಿದೆ. 2 ಪಿಕಪ್ ವಾಹನಗಳನ್ನು ಹಾಗೂ 5 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಚಿಬಿದ್ರೆ ಗ್ರಾಮ ಬೆಳ್ತಂಗಡಿ ನಿವಾಸಿ ಯತೀಂದ್ರ (24), ಚಾರ್ಮಾಡಿ ಗ್ರಾಮ ಬೆಳ್ತಂಗಡಿ ನಿವಾಸಿ ಉಸ್ಮಾನ್ (36, ತೊಟತ್ತಾಡಿ ಗ್ರಾಮ ಬೆಳ್ತಂಗಡಿ ನಿವಾಸಿ ಅರವಿಂದ (30), ಚಿಬಿದ್ರೆ ಗ್ರಾಮ ಬೆಳ್ತಂಗಡಿ ನಿವಾಸಿ ಆರೀಫ್ (27) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕು ಮಲವಂತಿಕೆ ಗ್ರಾಮದ ಏಳನೀರು ಹೋಗುವ ರಸ್ತೆಯಲ್ಲಿ 5 ಜಾನುವಾರುಗಳನ್ನು ಯಾವುದೇ ಪರವಾನಗೆ ಇಲ್ಲದೇ ಎರಡು ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಮುರಳಿಧರನಾಯ್ಕ ಕೆ ಜಿ , ಪೊಲೀಸ್ ಉಪನಿರೀಕ್ಷಕರು (ಕಾ&ಸು) ಬೆಳ್ತಂಗಡಿ ಪೊಲೀಸ್ ಠಾಣೆ ಬೆಳ್ತಂಗಡಿರವರು ಠಾಣಾ ಸಿಬ್ಬಂದಿಗಳೊಂದಿಗೆ ಬೆಳ್ತಂಗಡಿ ತಾಲೂಕು ಮಲವಂತಿಕೆ ಗ್ರಾಮದ ಕಜಕ್ಕೆ ಎಂಬಲ್ಲಿಗೆ ತೆರಳಿ 2 ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ 1 ಪಿಕಪ್ ವಾಹನದಲ್ಲಿ 03 ಇನ್ನೊಂದು ವಾಹನದಲ್ಲಿ 02 ಜಾನುವಾರುಗಳು ಹಿಂಸಾತ್ಮಕವಾಗಿ ತುಂಬಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ವಾಹನದಲ್ಲಿದ್ದ ಆಪಾದಿತರುಗಳ ಬಳಿ ವಿಚಾರಿಸಿದಾಗ ಅವರು ಯಾವುದೇ ಪರವಾನಿಗೆ ಇಲ್ಲದೇ ಜಾನುವಾರುಗಳನ್ನು ಮಾಂಸಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಮುಂದಿನ ಕಾನೂನುಕ್ರಮಕ್ಕಾಗಿ 02 ಪಿಕಪ್ ವಾಹನಗಳನ್ನು ಹಾಗೂ 05 ಜಾನುವಾರುಗಳನ್ನು ಮತ್ತು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 84/2024 ಕಲಂ 5,7,12 ಕರ್ನಾಟಕ ಜಾನುವಾರು ಪ್ರತಿಬಂಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಆದ್ಯಾದೇಶ 2020 ಮತ್ತು ಕಲಂ 11(ಡಿ) ಪ್ರಾಣಿ ಹಿಂಸೆ ತಡೆಕಾಯಿದೆ 1960 ರಂತೆ ಪ್ರಕರಣ ದಾಖಲಾಗಿರುತ್ತದೆ.

Check Also

22 ಲಕ್ಷ BPL, ಅಂತ್ಯೋದಯ ಕಾರ್ಡ್‌ ರದ್ದು..! ದಕ್ಷಿಣ ಕನ್ನಡ 1.11 ಲಕ್ಷ, ಉಡುಪಿ 80 ಸಾವಿರ ಕಾರ್ಡ್‌ ರದ್ದು

ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗದೇ ಸಂಕಷ್ಟ ಎದುರಿಸುತ್ತಿರುವ ಹೊತ್ತಲ್ಲೇ ಬಿಪಿಎಲ್‌ ಕಾರ್ಡುದಾರರಿಗೆ ಮತ್ತೊಂದು ಶಾಕ್‌ …

Leave a Reply

Your email address will not be published. Required fields are marked *

You cannot copy content of this page.