ಶಿರೂರು ಗುಡ್ಡ ಕುಸಿತ; ಮೂರನೇ ಹಂತದ ಕಾರ್ಯಾಚರಣೆ ವೇಳೆ ಸಿಕ್ಕಿತು ಮೂಳೆ..!

ಅಂಕೋಲಾ: ಶಿರೂರು ಗುಡ್ಡ ಕುಸಿತದ ಮೂರನೇ ಹಂತದ ಮೂರನೇ ದಿನದ ಶೋಧ ಕಾರ್ಯಾಚರಣೆ ವೇಳೆ ಮೂಳೆಯೊಂದು ಸಿಕ್ಕಿದೆ.

ಗಂಗಾವಳಿ ನದಿಯ ಆಳದಿಂದ ಮೇಲೆತ್ತಲಾದ ಮಣ್ಣು ರಾಶಿಯಲ್ಲಿ ಮೂಳೆಯ ತುಂಡೊಂದು ಪತ್ತೆಯಾಗಿದ್ದು, ಇದು ಜುಲೈ 16 ರಂದು ನಡೆದ ದುರ್ಘಟನೆಯಲ್ಲಿ ಕಣ್ಮರೆಯಾಗಿ ಇದುವರೆಗೂ ಪತ್ತೆಯಾಗದ ಮೂವರಲ್ಲಿ ಯಾರದಾದರೂ ಆಗಿರಬಹುದೇ ಎಂಬ ಜಿಜ್ಞಾಸೆ ಆರಂಭವಾಗಿದೆ. ಇದು ಮನುಷ್ಯರ ಮೂಳೆಯೇ ಅಥವಾ ಯಾವುದೋ ಪ್ರಾಣಿಯ ಮೂಳೆಯೇ ಎನ್ನುವ ಪ್ರಶ್ನೆಯೂ ಕಾಡಲಾರಂಭಿಸಿದ.

ಶಿರೂರು ದುರಂತದಲ್ಲಿ ಕಣ್ಮರೆಯಾಗಿರುವ ಶಿರೂರಿನ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ, ಮತ್ತು ಕೇರಳದ ಲಾರಿ ಚಾಲಕ ಅರ್ಜುನ್ ಅವರ ಮೃತದೇಹಗಳು ಘಟನೆ ಸಂಭವಿಸಿ ಎರಡು ತಿಂಗಳು ಕಳೆದರೂ ಪತ್ತೆಯಾಗಿಲ್ಲ. ಕಣ್ಮರೆಯಾದವರ ಎಲುಬಿನ ತುಂಡಾದರೂ ಸಿಕ್ಕರೆ ಸಂಸ್ಕಾರ ಕಾರ್ಯ ನಡೆಸುವ ನಿರೀಕ್ಷೆಯಲ್ಲಿ ಅವರ ಕುಟುಂಬದವರಿದ್ದಾರೆ.

ಹೀಗಾಗಿ ಪ್ರತಿದಿನ ಶೋಧ ಕಾರ್ಯಾಚರಣೆ ಸ್ಥಳದಲ್ಲಿ ಕುಟುಂಬದವರು ಹಾಜರಿರುವುದು ಕಂಡುಬರುತ್ತಿದೆ. ವೈಜ್ಞಾನಿಕ ಪರೀಕ್ಷೆ ಬಳಿಕವೇ ಈ ಮೂಳೆಯ ಕುರಿತು ನಿಖರವಾದ ಮಾಹಿತಿ ಸಿಗಲಿದೆ.

Check Also

ಮುಸ್ಲಿಮರೇ ಇಲ್ಲದ ದೇಶಗಳಿವು : ಜಗತ್ತಿನ ಈ ರಾಷ್ಟ್ರಗಳಲ್ಲಿ ಮಸೀದಿಗಳೂ ಇಲ್ಲ!

ನವದೆಹಲಿ : ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ, ಹಿಂದೂಗಳು, ಮುಸ್ಲಿಮರು, ಬೌದ್ಧರು, ಕ್ರಿಶ್ಚಿಯನ್ನರು, ಸಿಖ್ಖರು ಮತ್ತು ಇತರರನ್ನು ಒಳಗೊಂಡಂತೆ ವಿವಿಧ ಧರ್ಮಗಳ …

Leave a Reply

Your email address will not be published. Required fields are marked *

You cannot copy content of this page.