March 20, 2026
WhatsApp Image 2024-08-19 at 8.56.25 AM
ಉಡುಪಿ: ವಿದೇಶಕ್ಕೆ ಹೋಗಲು ವೀಸಾ ಮಾಡಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿದೆ.
ಜಡ್ಕಲ್ ಗ್ರಾಮದ ಶಾಜನ್ ಎಂಬವರ ಮಗ ಶಿಜೋ ವಿದ್ಯಾಬ್ಯಾಸ ಮುಗಿದ ಬಳಿಕ ಉದ್ಯೋಗ ಹುಡುಕುತ್ತಿದ್ದು, ಶಿಜೋ ಜೊತೆ ಓದಿರುವ ಗೌತಮ್, ನ್ಯೂಜಿಲೆಂಡ್‌ಗೆ ಹೋಗಲು ವೀಸಾ ಮಾಡಿಕೊಡಲು 15,50,000 ರೂ. ಹಣ ಕೇಳಿದ್ದರು. ಇದನ್ನು ನಂಬಿದ ಅವರು ಅವರ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 11,75,000ರೂ. ಹಣವನ್ನು ಪಾವತಿಸಿದ್ದರು. ಬಳಿಕ ವೀಸಾ ನೀಡದೇ ಮೊಸ ಮಾಡಿರುವುದಾಗಿ ದೂರಲಾಗಿದೆ.

 

 

ಹಣ ವಾಪಾಸು ನೀಡುವಂತೆ ಅವರ ಮನೆಗೆ ಹೋದಾಗ 3,75,000ರೂ. ಹಣ ವಾಪಾಸು ನೀಡಿದ್ದು, ಬಾಕಿ ಉಳಿದ 8,95,000ರೂ. ಹಣವನ್ನು 15 ದಿನಗಳಲ್ಲಿ ನೀಡುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.