March 21, 2026
WhatsApp Image 2024-08-18 at 5.51.33 PM

 ಈಗಾಗಲೇ 2.68 ಕೋಟಿ ರೈತರ ಆಧಾರ್‌ ಸೀಡಿಂಗ್‌ ಕೆಲಸ ಮುಕ್ತಾಯವಾಗಿದ್ದು, ಆಗಸ್ಟ್‌ ತಿಂಗಳಾಂತ್ಯದೊಳಗಾಗಿ ಆಧಾರ್ ಸೀಡಿಂಗ್‌ ಕೆಲಸವನ್ನು ಸಂಪೂರ್ಣಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಅವರು, “ರಾಜ್ಯಾದ್ಯಂತ 4.8 ಕೋಟಿ ಜಮೀನಿನ ಮಾಲಿಕತ್ವ ಇದೆ.

ಈವರೆಗೆ 2.68ಕೋಟಿ ರೈತರನ್ನು ಖುದ್ದು ಭೇಟಿ ಮಾಡಿ ಆಧಾರ್‌ ಜೊತೆಗೆ ಆರ್‌ಟಿಸಿ ಲಿಂಕ್‌ ಮಾಡಲಾಗಿದೆ. ಶೇ.65 ರಷ್ಟು ಕೆಲಸ ಸಂಪೂರ್ಣವಾಗಿದ್ದು, ಈ ತಿಂಗಳಾಂತ್ಯದೊಳಗೆ ಕನಿಷ್ಟ ಶೇ.90 ರಷ್ಟು ಕೆಲಸ ಮುಗಿಸುವ ಗುರಿ ಹೊಂದಲಾಗಿದೆ” ಎಂದರು.

ಮುಂದುವರೆದು, “ಆಧಾರ್‌ ಸೀಡಿಂಗ್‌ ನಿಂದಾಗಿ ಸರ್ಕಾರಕ್ಕೆ ಸಾಕಷ್ಟು ಅಂಕಿಅಂಶಗಳು ಸಿಗುತ್ತಿದೆ. 36.53 ಲಕ್ಷ ಜಮೀನುಗಳಲ್ಲಿ ವ್ಯಕ್ತಿ ತೀರಿ ಹೋಗಿದ್ರೂ ಪಹಣಿಯಲ್ಲಿ ಅವರ ಹೆಸರೇ ಉಲ್ಲೇಖವಾಗಿರುವುದು ಆಧಾರ್‌ ಸೀಡಿಂಗ್‌ನಿಂದ ತಿಳಿದುಬಂದಿದೆ. ಹೀಗಾಗಿ ಎರಡು ತಿಂಗಳ ನಂತರ ಅಧಾಲತ್‌ ಮೂಲಕ ಫೌತಿಖಾತೆ ಅಭಿಯಾನ ಆರಂಭಿಸುವ ಚಿಂತನೆ ಇದೆ. ಅಲ್ಲದೆ, ಆಧಾರ್‌ ಸೀಡಿಂಗ್‌ನಿಂದಾಗಿ ನಕಲಿ ವ್ಯಕ್ತಿ ಸೃಷ್ಟಿಸಿ ಅಕ್ರಮವಾಗಿ ಜಮೀನು ಮಾರಾಟವನ್ನು ತಪ್ಪಿಸಬಹುದು, ಬಿಟ್ಟುಹೋದ ಸರ್ಕಾರದ ಜಮೀನುಗಳೂ ಸಹ ಇದೀಗ ಸಿಕ್ಕಿದೆ, ಒತ್ತುವರಿಯಾದದ್ದೂ ಗೊತ್ತಾಗಿದೆ. ಜಮೀನಿಗೆ ಆಧಾರ್‌ ಲಿಂಕ್‌ ಮಾಡುವಾಗ 2.20 ಲಕ್ಷ ಜಮೀನು ಸರ್ಕಾರಿ ಭೂಮಿ ಎಂದು ಗುರುತಿಸದ ಭೂಮಿ ಇವೆ ಎಂದು ತಿಳಿದುಬಂದಿದೆ. ಆಧಾರ್‌ ಸೀಡಿಂಗ್‌ ಮುಗಿಯುವುದರ ಒಳಗಾಗಿ 3 ರಿಂದ 3.50 ಲಕ್ಷ ಹೆಚ್ಚುವರಿ ಸರ್ಕಾರಿ ಭೂಮಿ ಲೆಕ್ಕಕ್ಕೆ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

About The Author

Leave a Reply

Your email address will not be published. Required fields are marked *

You cannot copy content of this page.