March 21, 2026
WhatsApp Image 2024-08-13 at 3.04.00 PM

ಪುತ್ತೂರು: ಲಾಡ್ಜ್ ಒಂದರಲ್ಲಿ ಯಾವುದೇ ಮಾಹಿತಿ ನೀಡದೆ ರೂಂ ಪಡೆದಿದ್ದ ಮುಸ್ಲಿಂ ಯುವಕ, ಹಿಂದೂ ಯುವತಿಯನ್ನು ಪೊಲೀಸರು ಮನೆಗೆ ಕಳುಹಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ನೆಹರೂನಗರದಲ್ಲಿ ಕಾರ್ಯಾಚರಿಸುತ್ತಿರುವ ಕೀರ್ತನಾ ಲಾಡ್ಜ್ ನಲ್ಲಿ ಜೋಡಿ ರೂಂ ಪಡೆದಿದ್ದಾರೆ ಎಂದು ಪೋಲೀಸರಿಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾಡ್ಜ್ ನ ದಾಖಲೆ ಪುಸ್ತಕ ಪರಿಶೀಲಿಸಿದ್ದಾರೆ. ಆದರೆ ಜೋಡಿಯ ದಾಖಲೆ ಪಡೆಯದೆ ಲಾಡ್ಜ್ ಸಿಬ್ಬಂದಿಗಳು ರೂಂ ನೀಡಿದ್ದಾರೆ. ಬಳಿಕ ಪೊಲೀಸರು ಅನ್ಯಕೋಮಿನ ಜೋಡಿಯನ್ನು ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ್ದಾರೆ.

ಲಾಡ್ಜ್ ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂದು ಹಿಂದೂಪರ ಸಂಘಟನೆಗಳ ಆರೋಪಿಸಿದ್ದು, ಕೆಲ ಕಾಲ ಲಾಡ್ಜ್ ಬಳಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಿಚಾರಣೆಗಾಗಿ ಲಾಡ್ಜ್ ಸಿಬ್ಬಂದಿಗಳನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.