March 20, 2026
WhatsApp Image 2024-08-12 at 8.53.43 AM

ಉಡುಪಿ: ಎಲೆಕ್ಟ್ರಾನಿಕ್ ಶೋರೂಮ್’ವೊಂದರ ಕ್ಲಸ್ಟರ್ ಮ್ಯಾನೆಜರ್’ಗೆ ಚೂರಿ ಇರಿದು ಆರೋಪಿ ಪರಾರಿಯಾದ ಕುರಿತು ಪ್ರಕರಣ ದಾಖಲಾಗಿದೆ.

ಚೂರಿ ಇರಿತಕ್ಕೊಳಗಾದ ಸಂತ್ರಸ್ಥ ಸಂತೆಕಟ್ಟೆ ಮೂಲದ ರೋನ್ಸನ್‌ ಎವರೆಸ್ಟ್‌ ಡಿʼಸೋಜಾ(36) ವಾಗಿದ್ದು ಇವರು ಉಡುಪಿ ಸಿಟಿ ಬಸ್‌ ನಿಲ್ದಾಣದ ಬಳಿ ಇರುವ ಹರ್ಷ ಶೋರೂಂ ನಲ್ಲಿ ಕ್ಲಸ್ಟರ್‌ ಮ್ಯಾನೇಜರ್‌ ಆಗಿ ಕೆಲಸವನ್ನು ಮಾಡಿಕೊಂಡಿದ್ದಾರೆ.

ಕೆಲಸದ ವಿಚಾರವಾಗಿ ವಾಗ್ವಾದ ನಡೆದು ನಂತರ ಆರೋಪಿ ಸೆಕ್ಯುರಿಟಿ ಗಾರ್ಡ್ ಪ್ರಸಾದ್ ಎಂಬುವವನುಅಡ್ಡಗಟ್ಟಿ ತನ್ನ ಕಿಸೆಯಲ್ಲಿದ್ದ ಚೂರಿಯಿಂದ ಕೊಲ್ಲುವ ಉದ್ದೇಶದಿಂದ ಕುತ್ತಿಗೆಗೆ ಚುಚ್ಚಿದ್ದು ನಂತರ ಕಾಲಿನಿಂದ ಕೆಳಗೆ ಬೀಳಿಸಿ ಎದೆಯ ಭಾಗಕ್ಕೆ ಚೂರಿಯಿಂದ ಚುಚ್ಚಿ, ಕಾಲಿನಿಂದ ಒದ್ದು, ಬೆದರಿಕೆ ಹಾಕಿ ಪರಾರಿಯಾಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 145/2024 ಕಲಂ :126, 115, 352, 351(2), 109 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

About The Author

Leave a Reply

Your email address will not be published. Required fields are marked *

You cannot copy content of this page.