March 21, 2026
WhatsApp Image 2024-08-09 at 5.53.28 PM

ಬೆಳ್ತಂಗಡಿ : ಪರವಾನಿಗೆ ಇಲ್ಲದೇ ನದಿಗಳಿಂದ ಅಕ್ರಮವಾಗಿ ಮರಳು ದಂಧೆ ನಡೆಸಿ ಮರಳು ಸಾಗಿಸುತ್ತಿದ್ದ ಲಾರಿಗಳ ವಿರುದ್ದ ಬೆಳ್ತಂಗಡಿ ತಹಶೀಲ್ದಾರ್ ತಂಡ ಕಾರ್ಯಾಚರಣೆದ್ದಾರೆ. ಆ.9 ರಂದು ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಿಂದ ಅಕ್ರಮವಾಗಿ ನದಿಗಳಿಂದ ಮರಳು ತುಂಬಿಸಿಕೊಂಡು ಕಕ್ಕಿಂಜೆ ಕಡೆ ಸಾಗಾಟ ಮಾಡುತ್ತಿದ್ದ ಒಂದು ಲಾರಿ ಹಾಗೂ ಒಂದು ಟೆಂಪೋವನ್ನು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ತಂಡ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡು ಧರ್ಮಸ್ಥಳ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಅಕ್ರಮ ಮರಳು ಸಾಗಾಟದ ಎರಡು ಲಾರಿಗಳ ಮತ್ತು ಮರಳಿನ ಬಗ್ಗೆ ಕ್ರಮ ಕೈಗೊಳ್ಳಲು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಬೆಳ್ತಂಗಡಿ ತಹಶೀಲ್ದಾರ್ ವರದಿಯನ್ನು ಸಲ್ಲಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.