ಬಂಟ್ವಾಳ: ಅನ್ಯಕೋಮಿನ ಯುವಕನೋರ್ವ ವಿವಾಹಿತ ಮಹಿಳೆಯನ್ನು ಅಡ್ಡಗಟ್ಟಿ ನನಗೆ ನೀನು ಬೇಕು ಎಂದು ಕಿರುಕುಳ- ದೂರು ದಾಖಲು

ಬಂಟ್ವಾಳ: ಅನ್ಯಕೋಮಿನ ಯುವಕನೋರ್ವ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಘಟನೆ ಬಂಟ್ವಾಳ ತಾಲೂಕಿನ ಕರಿಯಂಗಳದಲ್ಲಿ ನಡೆದಿದೆ.

ಅನ್ಯ ಕೋಮಿನ ಯುವಕನೋರ್ವ ವಿವಾಹಿತ ಮಹಿಳೆಯನ್ನು ಅಡ್ಡಗಟ್ಟಿ  ನನಗೆ ನೀನು ಬೇಕು, ನಿನ್ನನ್ನು ಅನುಭವಿಸದೆ ಬಿಡುವುದಿಲ್ಲ ಎಂಬುವುದಾಗಿ ಹೇಳಿ,  ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ದೂರನ್ನು ನೀಡಿದ್ದಾಳೆ.

ಆರೋಪಿಯನ್ನು ಕರಿಯಂಗಳ ನಿವಾಸಿ ತಸ್ಸೀಫ್ ಎಂದು ಗುರುತಿಸಲಾಗಿದೆ. ಜತೆಗೆ ಈ ಹಿಂದೆಯೂ ಕಿಟಕಿಯಲ್ಲಿ ಇಣುಕಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿವಾಹಿತ ಮಹಿಳೆಯೊಬ್ಬರು ತನ್ನ ಪುತ್ರಿಯನ್ನು ಟ್ಯೂಷನ್ ಗೆ ಬಿಟ್ಟು ಮನೆಗೆ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿ ಎದೆಯ ಭಾಗಕ್ಕೆ ಕೈ ಹಾಕಿ ನೀನು ಸಿಗದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಕಾಪು: ಎರಡು ಗುಂಪುಗಳ ನಡುವೆ ಹೊಡೆದಾಟ- ಪ್ರಕರಣ ದಾಖಲು

ಕಾಪು: ಮಣಿಪುರ ಗ್ರಾಮದ ರಹಮಾನಿಯ ಜುಮ್ಮಾ ಮಸೀದಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಎರಡು ಯುವಕರ ಗುಂಪು ಸೇರಿಕೊಂಡು ಶಾಂತಿ ಭಂಗ …

Leave a Reply

Your email address will not be published. Required fields are marked *

You cannot copy content of this page.