March 11, 2026
WhatsApp Image 2024-07-31 at 3.03.25 PM

ಮಂಗಳೂರು: ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ವಿದೇಶಕ್ಕೆ ತೆರಳಲು ಯತ್ನಿಸುತ್ತಿದ್ದಾಗ ಐದು ವರ್ಷಗಳ ಹಿಂದಿನ ಹಳೆ ಪ್ರಕರಣದಲ್ಲಿ ಇಮಿಗ್ರೇಶನ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಹಳೆ ಆರೋಪಿಯನ್ನು ಕೋಣಾಜೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಗಡಿಭಾಗ ತಲೆಕ್ಕಿ ಗ್ರಾಮದ ನಿವಾಸಿ ಮೊಹಮ್ಮದ್ ಬಶೀರ್ ಬಂಧಿತ ವ್ಯಕ್ತಿ. ಈತನ ವಿರುದ್ಧ ಕೋಣಾಜೆ ಠಾಣೆಯಲ್ಲಿ ಗಾಂಜಾ ಮಾರಾಟ, ವಂಚನೆ ಪ್ರಕರಣ ದಾಖಲಾಗಿತ್ತು. ಕೋರ್ಟಿನಿಂದ ವಾರೆಂಟ್ ಇದ್ದರೂ 5 ವರ್ಷಗಳಿಂದ ತಲೆಮರೆಸಿಕೊಂಡು ಓಡಾಡಿಕೊಂಡಿದ್ದ. ಇದೀಗ ಕ್ಯಾಲಿಕಟ್ ಮೂಲಕ ವಿದೇಶಕ್ಕೆ ತೆರಳಲು ಯತ್ನಿಸುತ್ತಿದ್ದಾಗ ಹಳೆ ಕೇಸು ಇದ್ದುದರಿಂದ ವಶಕ್ಕೆ ಪಡೆದಿದ್ದಾರೆ. ಕೋಣಾಜೆ ಪೊಲೀಸ್ ನಿರೀಕ್ಷಕ ರವೀಂದ್ರ ಸಿಎಂ, ಎಸ್ಐಗಳಾದ ನಾಗರಾಜ್ ಎಸ್, ಪುನೀತ್ ಗಾಂವ್ಕರ್, ಸಿಬಂದಿಗಳಾದ ಮಹಮ್ಮದ್ ಶರೀಫ್, ಸಂತೋಷ್ ಕೆಸಿ ಬಂಧಿಸಿ ಕೋರ್ಟಿಗೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ.

ಇನ್ನೊಂದು ಪ್ರಕರಣದಲ್ಲಿ ಹತ್ತು ವರ್ಷಗಳಿಂದ ಮುಂಬೈಯಲ್ಲಿ ತಲೆಮರೆಸಿಕೊಂಡಿದ್ದ ಅಂಬ್ಲಮೊಗರು ನಿವಾಸಿ ಚೇತನ್ ರೈ ಎಂಬಾತನನ್ನು ಕೋಣಾಜೆ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಕೋಣಾಜೆ, ಸುರತ್ಕಲ್, ಮಂಗಳೂರು ದಕ್ಷಿಣ ಠಾಣೆಗಳಲ್ಲಿ ಕೇಸುಗಳಿದ್ದು, ವಾರೆಂಟ್ ಇದ್ದರೂ ತಲೆಮರೆಸಿಕೊಂಡಿದ್ದ. ಉಳ್ಳಾಲದ ಸುಭಾಷ್ ನಗರಕ್ಕೆ ಬಂದಿರುವುದು ತಿಳಿದು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.