ಸುಬ್ರಹ್ಮಣ್ಯ: ಕುಮಾರಧಾರ ನದಿಯಲ್ಲಿ ನಿನ್ನೆ ತಡ ರಾತ್ರಿ ಆನೆಯ ಮೃತದೇಹ ಪತ್ತೆಯಾಗಿದೆ.
ಸುಬ್ರಹ್ಮಣ್ಯ ಸಮೀಪ ಹರಿಯುವ ಕುಮಾರಧಾರಾ ನದಿಯಲ್ಲಿ ನಿನ್ನೆ ತಡ ರಾತ್ರಿ ಪತ್ತೆಯಾದ ಆನೆಯ ಮೃತದೇಹ ಪತ್ತೆಯಾಗಿದ್ದು, ಕಾಡಿನಲ್ಲಿದ್ದ ಆನೆ ನದಿಯ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ನಿನ್ನೆ ರಾತ್ರಿ ಪ್ರವಾಹ ನೀರಿನಲ್ಲಿ ಆನೆ ಮೃತದೇಹ ಕೊಚ್ಚಿ ಕೊಂಡು ಬಂದಿದೆ, ಇದೀಗ ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಆನೆಯ ಮೃತದೇಹಕ್ಕೆ ಅರಣ್ಯ ಇಲಾಖೆ ಹುಡುಕಾಟ ಆರಂಭಿಸಿದ್ದಾರೆ.