March 16, 2025 8:19:38 PM
WhatsApp Image 2024-07-05 at 10.40.36 AM

ಕಲಾಸ್ಪಂದನ ಕಲಾ ಶಾಲೆಯು ಮೂವತ್ತನೆ ಯ ವರ್ಷಕ್ಕೆ ಕಾಲಿಡುವ ಪ್ರಯುಕ್ತ ವರ್ಷದುದ್ದಕ್ಕೂ ಆಯೋಜಿಸುವ ಸರಣಿ ಕಾರ್ಯಕ್ರಮ.
ಡಾಕ್ಟರ್ ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ (ರಿ) ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ ವೀಣಾ ಸಂಧ್ಯಾ ಎನ್ನುವ
ಪಂಚ ವೀಣಾ ಕಾರ್ಯಕ್ರಮವನ್ನು 20.06.2024 ಶನಿವಾರ ಸಂಜೆ ಗ್ರೀನ್ ವ್ಯಾಲಿ ಪ್ಯಾರಿಡೈಸ್ ರಿಟೈರ್ಮೆಂಟ್ ಹೋಂ ಮಂಚಿ ಮಣಿಪಾಲ ಇಲ್ಲಿ ನಡೆಸಿ ಕೊಟ್ಟರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಎಸ್ ಎನ್ ಕಮಲಾ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು
ಡಾ ಇಂದಿರಾ ಶಾನುಭೋಗ ರವರು ಉಪಸ್ಥಿತರಿದ್ದರು.
ಕಲಾ ಸ್ಪಂದನ, ಮಣಿಪಾಲದ ನಿರ್ದೇಶಕಿ ವಿದುಷಿ ಪವನ ಬಿ ಆಚಾರ್ ರವರ ಬಳಗದಿಂದ ರಿಟೈರ್ಮೆಂಟ್ ಹೋಂ ನಲ್ಲಿರುವವರಿಗೆ ಆಕ್ಟಿವಿಟಿ ನಡೆಸಲಾಯಿತು.ನಂತರ ವಿಪಂಚಿ ತಂಡ ವೀಣಾ ವಾದನವನ್ನು ನಡೆಸಿದರು. ಕಾರ್ಯಕ್ರಮ ರಿಟೈರ್ಮೆಂಟ್ ಹೊಂ ನ ನಿವಾಸಿಗಳಿಂದ ತುಂಬಾ ಮೆಚ್ಚುಗೆಗಳಿಸಿತು. ಡಾಕ್ಟರ್ ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ನ ಸದಸ್ಯರಾದ ಡಾ. ಬಾಲಚಂದ್ರ ಆಚಾರ್ ಹಾಗೂ ಗ್ರೀನ್ ವ್ಯಾಲಿ ಪ್ಯಾರಿಡೈಸ್ ರಿಟೈರ್ಮೆಂಟ್ ಹೋಂ ನ ಟ್ರಸ್ಟಿ ಗಳಾದ ಡಾ. ತಾರಾ ಶಾನುಭೋಗ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.