April 30, 2026
frud-1

ಉಡುಪಿ : ಮುದ್ರಾ ಲೋನ್ ಹೆಸರಿನಲ್ಲಿ ಸಾಲ ಕೊಡುವುದಾಗಿ ವ್ಯಕ್ತಿಯೊಬ್ಬರಿಗೆ 2 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.

ಜಿಲ್ಲೆಯ ನಿವಾಸಿ ಸತೀಶ್ ಜೈನ್ ಅವರಿಗೆ ಅಪರಿಚಿತನೋರ್ವ ಮುದ್ರಾ ಲೋನ್ ಸಂಸ್ಥೆಯ ಮ್ಯಾನೇಜರ್ ಎಂದು ಕರೆ ಮಾಡಿ ಮುದ್ರಾ ಲೋನ್ ನೀಡುವುದಾಗಿ ತಿಳಿಸಿದ್ದ. ಲೋನ್ ಗೆ ಸಂಬಂಧಿಸಿ ದಾಖಲೆಗಳನ್ನು ಪಡೆದು, ನೋಂದಣಿ ಶುಲ್ಕ 3,200 ರೂ. ಜಮೆ ಮಾಡುವಂತೆ ತಿಳಿಸಿದ್ದ. ಶುಲ್ಕ ಪಾವತಿಸಿದ ಅನಂತರ ಪ್ರೊಸೆಸ್ ಚಾರ್ಜ್, ಇನ್ಸುರೆನ್ಸ್, ಚಾರ್ಜ್, ಎನ್‌ಒಸಿ, ಆರ್‌ಬಿಐ ಟ್ಯಾಕ್ಸ್ ಎಂದು ನಂಬಿಸಿ ಹಣ ಕಟ್ಟುವಂತೆ ತಿಳಿಸಿದ್ದ. ಸತೀಶ್ ಜೈನ್ ಅವರು ನವೆಂಬರ್‌ 3ರಿಂದ 11ರವರೆಗೆ ಹಂತ-ಹಂತವಾಗಿ 2,38,420 ರೂ. ಹಣವನ್ನು ಪಾವತಿಸಿ ವಂಚನೆಗೊಳಗಾಗಿದ್ದಾರೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.