ಅಳದಂಗಡಿ, ಎ. 21: ರಂಜಾನ್ ಹಬ್ಬದ ಪ್ರಯುಕ್ತ ಪೊಲೀಸರ ರೂಟ್‌ಮಾರ್ಚ್ ಇಂದು ಶಿರ್ಲಾಲು, ಸುಲ್ಕೇರಿ ಹಾಗೂ ಅಳದಂಗಡಿ ಪರಿಸರದಲ್ಲಿ ಜರಗಿತು.
ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ ಬಿ., ಪೊಲೀಸ್ ನಿರೀಕ್ಷಕ ಸತ್ಯನಾರಾಯಣ್, ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ಹರೀಶ್, ವೇಣೂರು ಪೊಲೀಸ್ ಉಪನಿರೀಕ್ಷಕರುಗಳಾದ ಶ್ರೀಶೈಲಾ ಡಿ. ಮುರುಗೋಡು, ಆನಂದ್ (ತನಿಖೆ), ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸ್ ಉಪನಿರೀಕ್ಷಕ ಸಂತೋಷ್ ಇದ್ದರು.