ಬೆಳ್ತಂಗಡಿ: 9 ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆ!

ಬೆಳ್ತಂಗಡಿ:  9 ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾರ್ಯತ್ತಡ್ಕದಲ್ಲಿ ನಡೆದಿದೆ.

ಕಳೆಂಜ ಗ್ರಾಮದ ಕಾರ್ಯತ್ತಡ್ಕ ನಿವಾಸಿ ವೆಂಕಪ್ಪ ಗೌಡರ ಪತ್ನಿ ಜಯಶ್ರೀ (29) ಹಾಗೂ ನವರ ಪುತ್ರಿ ರುಷಿಕಾ( 9 ತಿಂಗಳು) ನಾಪತ್ತೆಯಾದವರು. ಮಾ.22 ರಂದು ರಾತ್ರಿ ಜಯಶ್ರೀ ರೂಮಿನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ  ಮಲಗಿದ್ದು, ವೆಂಕಪ್ಪ ಗೌಡ ಅವರು ಮನೆಯ ಹಾಲ್‌ ನಲ್ಲಿ ಮಲಗಿದ್ದರು. ಮರುದಿನ ಬೆಳಿಗ್ಗೆ ವೆಂಕಪ್ಪಗೌಡರು ಎದ್ದು ನೋಡಿದಾಗ ಪತ್ನಿ ಹಾಗೂ 9 ತಿಂಗಳ ಮಗು ರುಷಿಕಾ ನಾಪತ್ತೆಯಾಗಿದ್ದರೆನ್ನಲಾಗಿದೆ.

ಈ ಬಗ್ಗೆ ವೆಂಕಪ್ಪಗೌಡ ಕೊಟ್ಟ ದೂರಿನಂತೆ  ಧರ್ಮಸ್ಥಳ ಪೊಲೀಸ್‌ ರಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ.

Check Also

ಬಂಟ್ವಾಳ: ಮದ್ವೆಯಾದ ಎರಡೇ ದಿನಕ್ಕೆ ನವ ವಿವಾಹಿತೆ ಸಾವು, ಪತಿ ಗಂಭೀರ

ಬಂಟ್ವಾಳ: ನವ ದಂಪತಿಗಳಿಬ್ಬರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ ಸಂಭವಿಸಿ ನವವಿವಾಹಿತೆ ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ …

Leave a Reply

Your email address will not be published. Required fields are marked *

You cannot copy content of this page.