ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ-ಆರೋಪಿ ಶಾರೀಕ್ ಜೊತೆ ಮದ್ಯ ಖರೀದಿಸಿದ ಮತ್ತೊಬ್ಬ ವ್ಯಕ್ತಿ ಯಾರು..?

ಮಂಗಳೂರು: ಮಂಗಳೂರು ನಗರದ ಗರೋಡಿಯಲ್ಲಿ ಆಟೋ ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ಒಬ್ಬನೇ ಮಾತ್ರವಲ್ಲದೆ ಆತನ ಜೊತೆ ಮತ್ತೊಬ್ಬ ವ್ಯಕ್ತಿ ಕೂಡಾ ಮಂಗಳೂರಿಗೆ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೈಸೂರು- ಮಂಗಳೂರು ಬಸ್‌ನಿಂದ ಪಡೀಲಿಗೆ ಬಂದಿಳಿದ ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ ಹಾಗೂ ಮತ್ತೋರ್ವ ವ್ಯಕ್ತಿ ನಾಗುರಿಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈನ್‌ಶಾಪ್‌ ಒಂದರಲ್ಲಿ ಮದ್ಯ ಖರೀದಿಸಿದ್ದಾರೆ. ಬ್ಯಾಗ್ ಹಿಡಿದುಕೊಂಡು ವೈನ್‌ಶಾಪ್‌ನಿಂದ ಹೊರಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊಹಮ್ಮದ್ ಶಾರೀಕ್ ಜೊತೆಗಿದ್ದ ವ್ಯಕ್ತಿ ಎಲ್ಲಿ ಹೋದ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಪೊಲಿಸಸರು ಇನ್ನು ಕೂಡಾ ಅಧಿಕೃತವಾದ ಮಾಹಿತಿ ನೀಡಿಲ್ಲ.

Check Also

ಉಳ್ಳಾಲ: ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಉಳ್ಳಾಲ: ನಾಪತ್ತೆಯಾಗಿದ್ದ ಅವಿವಾಹಿತ ವ್ಯಕ್ತಿಯ ಮೃತದೇಹ ಪಕ್ಕದ ಪಾಳು ಬಿದ್ದ ಬಾವಿಯಲ್ಲಿ ಇಂದು ಪತ್ತೆಯಾದ ಘಟನೆ ಕೊಲ್ಯ ,ಕುಜುಮಗದ್ದೆಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *

You cannot copy content of this page.