ಮಲ್ಪೆ: ಬಡಾನಿಡಿಯೂರು ಗ್ರಾಮದ ಕದಿಕೆ ಬೀಚ್‌ನ ಸಮುದ್ರ ತೀರದಲ್ಲಿ ನಸುಕಿನ ವೇಳೆ ಮದ್ಯ ಸೇವಿಸುತ್ತಿದ್ದ ಆರು ಮಂದಿಯನ್ನು ಮಲ್ಪೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ರಾತ್ರಿ ವೇಳೆ ಬೀಚ್‌ನಲ್ಲಿ ಮದ್ಯಪಾನ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಿಂದ ದಾಳಿ ನಡೆಸಿದ ಪೊಲೀಸರು ಸಂತೋಷ್(36), ಯಶವಂತ್ (39), ದಿಕ್ಷೀತ್(24), ಪ್ರಸಾದ್(28), ಲೊಕೇಶ್(39), ದೀರಜ್(33) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.