ಕಾಪು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಬಳಿ ಇಂದು ಬೆಳಗ್ಗೆ ನಡೆದಿದೆ.
ಅಪಘಾತದಲ್ಲಿ ಕಾರಿನ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಗುಜರಾತ್ ನೋಂದಣಿಯ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್ ದಾಟಿ ಹೆದ್ದಾರಿಯ ಇನ್ನೊಂದು ಬದಿಯ ರಸ್ತೆಗೆ ಹಾರಿದೆ. ಅಲ್ಲಿಂದ ಹೆದ್ದಾರಿ ಬದಿಯ ಮೋರಿಗೆ ಬಿದ್ದಿದೆ. ಈ ಸಂದರ್ಭ ರಸ್ತೆಯಲ್ಲಿ ಯಾವುದೇ ವಾಹನ ಅಥವಾ ಜನ ಸಂಚಾರವಿಲ್ಲದ ಕಾರಣ ಸಂಭಾವ್ಯ ಹೆಚ್ಚಿನ ಅನಾಹುತ ತಪ್ಪಿದೆ.