December 22, 2024
WhatsApp Image 2024-02-28 at 8.57.51 AM

ನೇಕ ಜನರು ಬಾಳೆಹಣ್ಣು ತಿನ್ನಲು ಇಷ್ಟಪಡುತ್ತಾರೆ. ಏಕೆಂದರೆ, ಬಾಳೆಹಣ್ಣಿನಲ್ಲಿ ಆರೋಗ್ಯಕರ ಪೋಷಕಾಂಶಗಳು ತುಂಬಿವೆ. ಇದನ್ನು ಸೂಪರ್‌ಫುಡ್ ಎಂದೂ ಕರೆಯಲಾಗುತ್ತದೆ. ನಿಯಮಿತವಾಗಿ ಬಾಳೆಹಣ್ಣು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು. ಆದರೆ, ಕೆಲವು ಆಹಾರ ಪದಾರ್ಥಗಳ ಜತೆ ಬಾಳೆಹಣ್ಣನ್ನು ಸೇವಿಸುವುದರಿಂದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ.

ಪೋಷಕಾಂಶಗಳ ಆಗರ
ಅಂದಹಾಗೆ ಬಾಳೆಹಣ್ಣಿಗೆ ಸೀಸನ್ ಎಂಬುದೇ ಇಲ್ಲ. ವರ್ಷವಿಡೀ ಲಭ್ಯವಿರುತ್ತದೆ. ಬಾಳೆಹಣ್ಣಿನಲ್ಲಿ ಫೈಬರ್, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಖನಿಜಗಳು ಮತ್ತು ವಿಟಮಿನ್​ಗಳಂತಹ ಸಾಕಷ್ಟು ಪೋಷಕಾಂಶಗಳಿವೆ. ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವವರು ಹಾಗೂ ಮಧುಮೇಹ ಇರುವವರು ಬಾಳೆಹಣ್ಣಿನಿಂದ ದೂರವಿರಿ ಎಂದು ಹೇಳಲಾಗುತ್ತದೆ. ಆದರೆ ಕೆಲವು ಆಹಾರಗಳೊಂದಿಗೆ ಬಾಳೆಹಣ್ಣನ್ನು ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಹಾಗಾದ್ರೆ ಆ ಆಹಾರಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಹಾಲು, ಕೆಂಪು ಮಾಂಸದೊಂದಿಗೆ ಬೇಡ
ಬಾಳೆಹಣ್ಣು ಆಮ್ಲೀಯ ಗುಣವನ್ನು ಹೊಂದಿದೆ. ಹಾಲು ಸಿಹಿಯಾಗಿರುತ್ತದೆ. ಇವೆರಡರ ಸಂಯೋಜನೆಯು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಶೀತ ಮತ್ತು ಕೆಮ್ಮಿನಂತಹ ಇತರ ಆರೋಗ್ಯ ಸಮಸ್ಯೆಗಳು ಸಹ ಸಂಭವಿಸುವ ಸಾಧ್ಯತೆಯಿದೆ. ಅದೇ ರೀತಿ ಕೆಂಪು ಮಾಂಸದಲ್ಲಿ ಪ್ಯೂರಿನ್ ಎಂಬ ಅಂಶ ಇರುತ್ತದೆ. ಇದು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ಆದಾಗ್ಯೂ, ಕೆಂಪು ಮಾಂಸದ ಹೆಚ್ಚಿನ ಪ್ರೋಟೀನ್ ಅಂಶವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆದರೆ, ಬಾಳೆಹಣ್ಣು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಹೀಗಾಗಿ ವಿರುದ್ಧ ಸ್ವಭಾವದ ಎರಡು ಆಹಾರಗಳನ್ನು ತಿನ್ನುವುದು ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಬಹಿರಂಗಪಡಿಸುತ್ತಾರೆ.

ಬೇಕರಿ ತಿನಿಸುಗಳ ಜತೆಯೂ ಬೇಡ
ಕೆಲವರು ಬ್ರೆಡ್ ಜೊತೆಗೆ ಬಾಳೆಹಣ್ಣು ತಿನ್ನುತ್ತಾರೆ. ಇದು ಅನಾರೋಗ್ಯಕರ ಎನ್ನುತ್ತಾರೆ ತಜ್ಞರು. ಬ್ರೆಡ್ ಅಥವಾ ಬೇಕರಿ ಆಹಾರಗಳು ಸಂಸ್ಕರಿಸಿದ ಪಿಷ್ಟಗಳನ್ನು ಹೊಂದಿರುತ್ತವೆ. ಈ ಆಹಾರಗಳು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಬಾಳೆಹಣ್ಣು ತ್ವರಿತ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಹೀಗಾಗಿ ಇವೆರಡನ್ನು ಒಟ್ಟಿಗೆ ತಿಂದರೆ ಅನೇಕ ರೋಗಗಳು ಬರುವ ಸಾಧ್ಯತೆಯೂ ಇರುತ್ತದೆ.

ಬಾಳೆಹಣ್ಣಿನ ಜೊತೆಗೆ ಆಮ್ಲೀಯ ಹಣ್ಣುಗಳಾದ ನಿಂಬೆ, ದಾಳಿಂಬೆ, ಸ್ಟ್ರಾಬೆರಿ ಇತ್ಯಾದಿಗಳನ್ನು ತಿನ್ನುವುದು ಒಳ್ಳೆಯದಲ್ಲ. ಬಾಳೆಹಣ್ಣಿನ ಅತಿಯಾದ ಸಿಹಿ ಗುಣದಿಂದಾಗಿ, ಎರಡನ್ನೂ ಒಟ್ಟಿಗೆ ತಿನ್ನುವುದರಿಂದ ವಾಕರಿಕೆ ಮತ್ತು ತಲೆನೋವು ಉಂಟಾಗುತ್ತದೆ ಎಂದು ಕೆಲವು ಅಧ್ಯಯನಗಳು ಬಹಿರಂಗಪಡಿಸುತ್ತವೆ.

ಬಾಳೆಹಣ್ಣುಗಳ ಪ್ರಯೋಜನಗಳನ್ನು ಸಂಪೂರ್ಣವಾಗಿ ಆನಂದಿಸಲು ಈ ಯಾವುದೇ ಆಹಾರಗಳನ್ನು ಸೇರಿಸದೆಯೇ ತಿನ್ನಬಹುದು. ನೀವು ಆಹಾರದ ವಿಷಯದಲ್ಲಿ ಹೆಚ್ಚು ಯೋಜಿಸಲು ಬಯಸಿದರೆ, ತಜ್ಞರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

About The Author

Leave a Reply

Your email address will not be published. Required fields are marked *

You cannot copy content of this page.