ಮಂಗಳೂರು: ಪುತ್ತೂರಿನ ಪುರುಷರಕಟ್ಟೆ ನಿವಾಸಿ ಚೈತ್ರಾ ಹೆಬ್ಬಾರ್ ನಾಪತ್ತೆ ಕೇಸ್ ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅನ್ಯಕೋಮಿನ ಯುವಕ ಶಾರೂಕ್ ಶೇಕ್ ಜೊತೆ ಚೈತ್ರಾ ಹೆಬ್ಬಾರ್ ಪರಾರಿಯಾರಿದ್ದಾರೆಂದು ಮಾಹಿತಿ ಲಭಿಸಿದೆ.
ಬಂಟ್ವಾಳದ ನೇರಳಕಟ್ಟೆಯ ಶಾರೂಕ್ ಶೇಕ್, ಸದ್ಯ ಪುತ್ತೂರಿನ ಕೂರ್ನಡ್ಕದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ. ಇದೀಗ ಇವರಿಬ್ಬರು ಬೆಂಗಳೂರಿಗೆ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ.
ಐಟಿಐ ವಿದ್ಯಾಭ್ಯಾಸ ಮಾಡಿರುವ ಶಾರೂಕ್ ಶೇಖ್ ಸೌದಿ ಅರೇಬಿಯಾ, ದುಬೈ ಹಾಗೂ ಕತಾರ್ ನಲ್ಲಿ ಕೆಲಸದಲ್ಲಿದ್ದ. ಕತಾರ್ ನಲ್ಲಿ ಒಂದು ವರ್ಷಗಳ ಕಾಲ ಜೈಲಿನಲ್ಲಿದ್ದ, ಈತನೆ ಚೈತ್ರಾ ಹೆಬ್ಬಾರ್ ಗೆ ಗಾಂಜಾದ ರುಚಿ ತೋರಿಸಿದ್ದ ಎನ್ನಲಾಗುತ್ತಿದೆ. ಚೈತ್ರಾ ಹೆಬ್ಬಾರ್ ಮಂಗಳೂರಿನಿಂದ ನಾಪತ್ತೆಯಾದ ಬಳಿಕ ಸುರತ್ಕಲ್ ನ ಎಟಿಎಂ ಒಂದರಲ್ಲಿ ಹಣ ವಿಥ್ ಡ್ರಾ ಮಾಡಿದ್ದು, ಇವರು ಅಕೌಂಟ್ ನಲ್ಲಿ ಲಕ್ಷಾಂತರ ಹಣ ಹೊಂದಿದ್ದರು. ಇದೀಗ ಚೈತ್ರಾ ಹೆಬ್ಬಾರ್ ಅಕೌಂಟ್ ಅನ್ನು ಪೊಲೀಸರು ಬ್ಲಾಕ್ ಮಾಡಿದ್ದಾರೆ. ಚೈತ್ರಾ ಹೆಬ್ಬಾರ್ ಮಂಗಳೂರಿನ ಪ್ರತಿಷ್ಠಿತ ಫ್ಲಾಟ್ ಒಂದರಲ್ಲಿ ಸ್ಟೇ ಆಗಿದ್ದರು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.