ಸುರತ್ಕಲ್: ಸ್ಕೂಟರ್‌ಗೆ ರೆಡಿಮಿಕ್ಸ್ ವಾಹನ ಢಿಕ್ಕಿ ಹೊಡೆದು ಸವಾರೆ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಬಳಿ ನಡೆದಿದೆ.
ಪೂರ್ಣಿಮಾ (29) ಮೃತಪಟ್ಟವರು. ರೆಹನಾ ಇಂಟರ್‌ನ್ಯಾಶನಲ್ ಶಾಲೆಯ ಶಿಕ್ಷಕಿಯಾಗಿದ್ದ ಪೂರ್ಣಿಮಾ ಸ್ಕೂಟರ್ ನಲ್ಲಿ ಸಹೋದರಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಲಾರಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಪೂರ್ಣಿಮಾ ಮೃತಪಟ್ಟಿದ್ದಾರೆ.