December 22, 2024
WhatsApp Image 2022-11-20 at 2.17.29 PM

ಬೇಕಾಗುವ ಪದಾರ್ಥಗಳು: ಚಿಕನ್ 1 ಕೆಜಿ, ಈರುಳ್ಳಿ 4, ಬೆಳ್ಳುಳ್ಳಿ 4 ಎಸಳು, ಹಸಿಮೆಣಸಿನಕಾಯಿ 2, ಮೊಸರು 1 ಕಪ್, ಗರಂ ಮಸಾಲ 1 ಚಮಚ, ತೆಂಗಿನ ತುರಿ ಕಾಲು ಕಪ್, ಸ್ವಲ್ಪ ಶುಂಠಿ, ಸಾಸಿವೆ ಅರ್ಧ ಚಮಚ, ಅರಿಶಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು. ಮಾಡುವ ವಿಧಾನ: ಚಿಕನ್ ಅನ್ನು ತುಂಡು ತುಂಡಾಗಿ ಕತ್ತರಿಸಿ ತೊಳೆಯಿರಿ. ತೆಂಗಿನ ತುರಿ, ಖಾರದಪುಡಿ, ಅರಿಶಿನ ಪುಡಿ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ರುಬ್ಬಿ ಆ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಮಿಶ್ರಣ ಮಾಡಿ 1 ಗಂಟೆ ಕಾಲ ಇರಿಸಿ. ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆಯನ್ನು ಸುರಿದು ಆ ಎಣ್ಣೆಯು ಬಿಸಿಯಾದಾಗ ಸಾಸಿವೆ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ.

ಈರುಳ್ಳಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ಆ ನಂತರ ಮಸಾಲೆಯಲ್ಲಿ ಮಿಶ್ರಣ ಮಾಡಿರುವ ಚಿಕನ್ ಹಾಕಿ ಮೂರ್ನಾಲ್ಕು ನಿಮಿಷ ಸೌಟ್ ನಿಂದ ಆಡಿಸಿ, ಬಳಿಕ ಮೊಸರು ಹಾಕಿ ಗರಂ ಮಸಾಲ ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ. ಆ ಪಾಕವು ಗ್ರೇವಿ ರೀತಿಗೆ ಬಂದ ನಂತರ ಉರಿಯಿಂದ ಕೆಳಗಿಳಿಸಿದರೆ ರುಚಿಕರ ಎನಿಸುತ್ತದೆ. ಅಗತ್ಯ ಎನಿಸಿದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

About The Author

Leave a Reply

Your email address will not be published. Required fields are marked *

You cannot copy content of this page.