March 14, 2026
WhatsApp Image 2023-11-30 at 12.02.19 PM

ಮದುವೆ ಆಗೋದಕ್ಕೆ ಒಪ್ಪದಂತ ಶಾಲಾ ಶಿಕ್ಷಕಿಯನ್ನು ತನ್ನ ಸಂಬಂಧಿಯೇ ಸಿನಿಮೀಯ ರೀತಿಯಲ್ಲಿ ಅಪಹರಿಸಿರುವಂತ ಘಟನೆ ಹಾಸನ ನಗರದ ಹೊರ ವಲಯದಲ್ಲಿ ನಡೆದಿದೆ.

ಹಾಸನ ನಗರದ ಹೊರವಲಯದ ಬಿಟ್ಟಗೌಡನಹಳ್ಳಿಯಲ್ಲಿ ಶಾಲಾ ಶಿಕ್ಷಕಿಯಾಗಿ ಅರ್ಪಿತಾ ಎಂಬುವರು ಕಾರ್ಯ ನಿರ್ವಹಿಸುತ್ತಿದ್ದರು.

ಇಂತಹ ಅವರನ್ನು ಮದುವೆ ಆಗುವಂತೆ ಅವರ ಸಂಬಂಧಿ ರಾಮು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.

ಅರ್ಪಿತಾ ಮಾತ್ರ ತನ್ನ ಸಂಬಂಧಿ ರಾಮುವನ್ನು ಮದುವೆಯಾಗೋದಕ್ಕೆ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಇಂದು ಸಿನಿಮಾ ಸ್ಟೈಲಲ್ಲಿ ಶಾಲಾ ಶಿಕ್ಷಕಿ ಅರ್ಪಿತಾಳನ್ನು ಅಪಹರಿಸಿಕೊಂಡು ಹೋಗಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಪೊಲೀಸರಿಗೂ ಅರ್ಪಿತಾ ಸಂಬಂಧಿಕರು ದೂರು ನೀಡಿದ್ದಾರೆ. ಅರ್ಪಿತಾಳನ್ನು ಸಂಬಂಧಿ ರಾಮು ಅಪಹರಿಸಿರೋದಾಗಿ ಶಂಕೆ ವ್ಯಕ್ತ ಪಡಿಸಿಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

About The Author

Leave a Reply

Your email address will not be published. Required fields are marked *

You cannot copy content of this page.