ರಾಜ್ಯ

ಗುಡ್ ನ್ಯೂಸ್ : ಕೇಂದ್ರ ಸರ್ಕಾರದಿಂದ ಇನ್ಮುಂದೆ ಬಡವರಿಗೆ ಅಕ್ಕಿ ಜೊತೆ ಸಿಗಲಿದೆ 9 ವಸ್ತುಗಳು!

ನವದೆಹಲಿ- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಚೀಟಿ ನೀಡುತ್ತವೆ. ಲಾನುಭವಿಗಳ ಆಹಾರ ಭದ್ರತೆಗಾಗಿ ಉಚಿತ ಪಡಿತರವನ್ನು ಒದಗಿಸುತ್ತದೆ. ಆದರೆ ಈಗ ಭಾರತ ಸರ್ಕಾರ ಈ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಹೊರಟಿದೆ. ಈ ಹಿಂದೆ ಕೇಂದ್ರವು ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ನೀಡುತ್ತಿತ್ತು. ಆದರೆ ಇದೀಗ ಉಚಿತ ಅಕ್ಕಿ ಬದಲಿಗೆ 9 ಅಗತ್ಯ ವಸ್ತುಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಭಾರತ ಸರ್ಕಾರದ ಉಚಿತ ಪಡಿತರ ಯೋಜನೆಯಡಿ ದೇಶದ 90 ಕೋಟಿ ಜನರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ. …

Read More »

80 ಸಾವಿರ ಮಂದಿಗೆ ಇನ್ನೂ ಬಾರದ ಜೂನ್ ತಿಂಗಳ `ಗೃಹಲಕ್ಷ್ಮಿ’ ಹಣ : ಮಹಿಳೆಯರ ಆಕ್ರೋಶ..!

ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಮತ್ತೆ ತಾಂತ್ರಿಕ ದೋಷ ಎದುರಾಗಿದ್ದು, ಸುಮಾರು 80 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಗೃಹಲಕ್ಷ್ಮಿಯೋಜನೆಯ ಹಣ ತಲುಪಿಲ್ಲ. ತಾಂತ್ರಿಕ ಸಮಸ್ಯೆಯಿಂದಾಗಿ 80 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ತಲುಪಿಲ್ಲ. ಲೋಕಸಭೆ ಚುನಾವಣೆ ಬಳಿಕ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣವನ್ನ ಖಾತೆಗೆ ಹಾಕಿರಲಿಲ್ಲ. ಮೂರು ತಿಂಗಳ ಬಳಿಕ ಜೂನ್ ತಿಂಗಳ ಗೃಹಲಕ್ಷ್ಮಿ ಹಣವನ್ನ ಕಳೆದ ತಿಂಗಳಿನಿಂದ ಹಾಕಲಾಗುತ್ತಿದೆ. ಆದರೆ ಹಣ ಹಾಕುವಾಗ ತಾಂತ್ರಿಕ ಸಮಸ್ಯೆಗಳು ಕಂಡುಬರುತ್ತಿದ್ದು, ಒಟ್ಟು 80 ಸಾವಿರ ಮಹಿಳೆಯರಿಗೆ ಇನ್ನು ಗೃಹಲಕ್ಷ್ಮಿಯ ಹಣ ಖಾತೆಗೆ ಬಂದಿಲ್ಲ. …

Read More »

ಆಗಸ್ಟ್ 31ರೊಳಗೆ ತಪ್ಪದೇ `RTC-ಆಧಾರ್’ ಲಿಂಕ್ ಮಾಡಿಕೊಳ್ಳಿ..!

 ಈಗಾಗಲೇ 2.68 ಕೋಟಿ ರೈತರ ಆಧಾರ್‌ ಸೀಡಿಂಗ್‌ ಕೆಲಸ ಮುಕ್ತಾಯವಾಗಿದ್ದು, ಆಗಸ್ಟ್‌ ತಿಂಗಳಾಂತ್ಯದೊಳಗಾಗಿ ಆಧಾರ್ ಸೀಡಿಂಗ್‌ ಕೆಲಸವನ್ನು ಸಂಪೂರ್ಣಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಅವರು, “ರಾಜ್ಯಾದ್ಯಂತ 4.8 ಕೋಟಿ ಜಮೀನಿನ ಮಾಲಿಕತ್ವ ಇದೆ. ಈವರೆಗೆ 2.68ಕೋಟಿ ರೈತರನ್ನು ಖುದ್ದು ಭೇಟಿ ಮಾಡಿ ಆಧಾರ್‌ ಜೊತೆಗೆ ಆರ್‌ಟಿಸಿ ಲಿಂಕ್‌ ಮಾಡಲಾಗಿದೆ. ಶೇ.65 ರಷ್ಟು ಕೆಲಸ ಸಂಪೂರ್ಣವಾಗಿದ್ದು, ಈ ತಿಂಗಳಾಂತ್ಯದೊಳಗೆ ಕನಿಷ್ಟ ಶೇ.90 ರಷ್ಟು ಕೆಲಸ ಮುಗಿಸುವ ಗುರಿ ಹೊಂದಲಾಗಿದೆ” ಎಂದರು. ಮುಂದುವರೆದು, “ಆಧಾರ್‌ ಸೀಡಿಂಗ್‌ ನಿಂದಾಗಿ …

Read More »

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರು- ಸಿದ್ದುಗೆ ಶುರುವಾಯ್ತು ಢವಢವ

ಬೆಂಗಳೂರು: ಮೂಡ ಹಗರಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್‌ಐಆರ್ ಆಗುವ ಸಾಧ್ಯತೆಯಿದೆ. ಮೈಸೂರು ಲೋಕಾಯುಕ್ತಕ್ಕೆ ಡಿಜೆ ಅಬ್ರಹಾಂ ಸಿದ್ದರಾಮಯ್ಯ ಮೇಲೆ ದೂರು ನೀಡಿದರು. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಪತ್ರವನ್ನು ಟಿಜೆ ಅಬ್ರಹಾಂ ಮೈಸೂರು ಲೋಕಾಯುಕ್ತಕ್ಕೆ ನೀಡಲಿದ್ದಾರೆ. ಇಂದು ರಾಜಭವನದಿಂದ ಟಿಜೆ ಅಬ್ರಹಾಂ ಪ್ರಾಸಿಕ್ಯೂಷನ್ ಸಾಂಕ್ಷನ್ ಪ್ರತಿ ಪಡೆಯು ಸಾಧ್ಯತೆಯಿದ್ದು, ರಾಜಭವನದಿಂದ ಸ್ಯಾಂಕ್ಷನ್ ಪ್ರತಿ ಲೋಕಾಯುಕ್ತಕ್ಕೂ ಸಹ ಹೋಗಲಿದೆ. ಲೋಕಾಯುಕ್ತಕ್ಕೆ ಪ್ರಾಸಿಕ್ಯೂಷನ್ ಸ್ಯಾಂಕ್ಷನ್ ಪ್ರತಿ ಸಿಕ್ಕ ಬಳಿಕ ಸಿದ್ದರಾಮಯ್ಯ …

Read More »

ಈ ಪ್ರಶಸ್ತಿ ‘ದೈವಕ್ಕೆ’ ಸಲ್ಲಬೇಕು : ರಾಷ್ಟೀಯ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದ ಬಳಿಕ ರಿಷಬ್ ಶೆಟ್ಟಿ

ಬೆಂಗಳೂರು : 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನ ಘೋಷಿಸಲಾಗಿದ್ದು, 2022 ರಿಂದ ಚಿತ್ರರಂಗದಲ್ಲಿ ಅತ್ಯುತ್ತಮವಾದುದನ್ನ ಆಚರಿಸಲಾಗುತ್ತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನವದೆಹಲಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿಜೇತರನ್ನು ಬಹಿರಂಗಪಡಿಸಿತು. ಕನ್ನಡಿಗ, ನಟ ರಿಶಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಇನ್ನು ಪ್ರಶಸ್ತಿ ಬಂದಿರುವ ಕುರಿತು ನಟ ನಿರ್ದೇಶಕ ರಿಷಬ್ ಶೆಟ್ಟಿ ಮೊದಲ ಪ್ರತಿಕ್ರಿಯೆ ನೀಡಿದ್ದು, ಪ್ರಶಸ್ತಿ ಘೋಷಣೆ ಮಾಡುವಾಗಲೇ ಪ್ರಶಸ್ತಿ ಬಂದಿರುವುದು ಗೊತ್ತಾಗಿದೆ. ಸಿನಿಮಾವನ್ನು ಜನ ನೋಡಿ ಮೆಚ್ಚುವುದು ಮುಖ್ಯವಾಗಿದೆ. ನಮ್ಮ ಸಿನಿಮಾ ತಂಡಕ್ಕೂ ಅಭಿನಂದನೆ ಹೇಳುತ್ತೇನೆ. ಕಾಂತಾರ ಚಿತ್ರಕ್ಕೆ ರಾಷ್ಟ್ರ …

Read More »

ಮಡಿಕೇರಿ: ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಅಡ್ಡೆ ಮೇಲೆ ದಾಳಿ – ಮೂವರ ಬಂಧನ

ಕೊಡಗು: ಕೊಡಗಿನಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲಿ ಮೂವರನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಆರೋಪಿಗಳಿಂದ ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 2 ನಾಡ ಬಂದೂಕು, 1 ನಾಡ ಪಿಸ್ತೂಲು ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ನಡೆಸಿದ ಪೊಲೀಸರು ಶಿವರಾಮ್, ರವಿ, ಕೋಟಿ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ಅವರ ಗುಂಪಿನ ನಾಯಕನಾಗಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಕೇರಳದ ಇಡುಕ್ಕಿ ಮೂಲದ ಸುರೇಶ್ (42) ನೇತೃತ್ದಲ್ಲೇ ಅಕ್ರಮ ಶಸ್ತ್ರಾಸ್ತ್ರಗಳು ಸಿದ್ಧವಾಗುತ್ತಿದ್ದವು …

Read More »

‘ಐದು ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ -ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಐದೂ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾಡಿನ ಜನತೆಗೆ 78 ನೇ ಸ್ವಾತಂತ್ರ್ಯೋತ್ಸವದ ಶುಭಾಷಯಗಳನ್ನು ಕೋರಿದ್ದಾರೆ. ಕಳೆದ 77 ವರ್ಷಗಳಲ್ಲಿ ಕರ್ನಾಟಕ ಮಹತ್ವದ ಪಾತ್ರ ಹೊಂದಿದೆ. ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಮೂಲಕ ಜನರ ಜೀವನ ಮಟ್ಟ ಸುದಾರಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 1.20 ಕೋಟಿ …

Read More »

ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ಹಿಂದೆ ಡಿಕೆ ಶಿವಕುಮಾರ್‌ ಕೈವಾಡವಿದೆ- ಕುಮಾರಸ್ವಾಮಿ

ಮೈಸೂರು: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಕೈವಾಡವಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಶನಿವಾರ ನಡೆದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ ಅವರು, ‘ನನ್ನ ಮಗನ ರಾಜಕೀಯ ಜೀವನಕ್ಕಾಗಿ ಅಣ್ಣನ ಮಗನನನ್ನ ಜೈಲಿಗೆ ಕಳಿಸಿದ್ದೇನೆ ಎಂದು ನೀವು ನನ್ನ ಮೇಲೆ ಆರೋಪ ಮಾಡಿದ್ದೀರಿ. ಆದರೆ, ಯಾವ ಎಸ್‌ಎಂ ಕೃಷ್ಣ, ಕೊತ್ವಾಲನ ಜೊತೆ ಜೀವನ ಮಾಡಿಕೊಂಡಿದ್ದ ನಿಮಗೆ ರಾಜಕೀಯ ಜೀವನ ಕೊಟ್ಟಿದ್ದರೋ, ರಾಜಕೀಯದಲ್ಲಿ ಬೆಳೆಸಿದ್ದೀರೋ ಅವರ ಮನೆಯನ್ನೇ ಹಾಳು …

Read More »

`ಗೃಹಲಕ್ಷ್ಮಿ’ ಯೋಜನೆಯ 2 ಕಂತಿನ ಹಣ ಬಿಡುಗಡೆ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇಂದಿನಿಂದ ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಲಿದೆ ಎಂದು ಹೇಳಿದ್ದಾರೆ. ಜನಾಂದೋಲನಾ ಸಮಾವೇಶದಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಂದಿನಿಂದ ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಲಿದೆ. ಇಂದಿನಿಂದ ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ. ಇನ್ನು ಯಜಮಾನಿಯರು, ನಿಮ್ಮ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕ ಹಣವನ್ನು ಬಂದಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನೂ 2 ದಿನದ ಒಳಗೆ ಎರಡು ಕಂತುಗಳ …

Read More »

ಕುಂದಾಪುರ: ವ್ಯಕ್ತಿ ನಾಪತ್ತೆ…!!

ಕುಂದಾಪುರ : ಬೆಂಗಳೂರಿಗೆ ಹೋದ ವ್ಯಕ್ತಿಯೋರ್ವರು ಮನೆಗೆ ವಾಪಾಸು ಬಾರದೇ ನಾಪತ್ತೆಯಾದ ಘಟನೆ ನಡೆದಿದೆ. ಕುಂದಾಪುರ ತಾಲೂಕು ಯಡಮೊಗೆ ಗ್ರಾಮದ ಹೊಸಬಾಳು ನಿವಾಸಿ ಅಣ್ಣಪ್ಪ (40) ಎಂಬ ವ್ಯಕ್ತಿಯು ಮಾರ್ಚ್ 12 ರಂದು ಮನೆಯಿಂದ ಹೋದವರು ವಾಪಸು ಬಂದಿರುವುದಿಲ್ಲ. 5 ಅಡಿ 5 ಇಂಚು ಎತ್ತರ, ಎಣ್ಣೆಕಪ್ಪು ಮೈ ಬಣ್ಣ ಹೊಂದಿರುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರು ದೂ.ಸಂಖ್ಯೆ: 08259-280299, ಮೊ.ನಂ:8277988963, ಮೊ.ನಂ:9480805456, ಕುಂದಾಪುರ ವೃತ್ತ ನಿರೀಕ್ಷಕರ ದೂ.ಸಂಖ್ಯೆ: 08254-230880 ಅಥವಾ ಉಡುಪಿ ಕಂಟ್ರೋಲ್ ರೂಮ್ ದೂ.ಸಂಖ್ಯೆ: …

Read More »

You cannot copy content of this page.