Recent Posts

ಮೂಡುಬಿದಿರೆ: ಮಾಂಟ್ರಾಡಿ ನಿಮಾಸಿ ನಾಪತ್ತೆ..!

ಮೂಡಬಿದಿರೆ: ಮಾಂಟ್ರಾಡಿ ಗ್ರಾಮದ ಕರ್ನಲ್ ಗುಡ್ಡೆಯ ನಿವಾಸಿ ಸುಂದರ ಸುವರ್ಣ ರವರು ಏಪ್ರಿಲ್ 24 ಬುಧವಾರದಂದು ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದು ನಾಪತ್ತೆಯಾಗಿದ್ದಾರೆ. ಇವರಿಗೆ ಸುಮಾರು 75 ವರ್ಷ ವಯಸ್ಸಾಗಿದ್ದು ಬಲಗೈ ಬಲಹೀನವಾಗಿದೆ. ಈ ಬಗ್ಗೆ ಮೂಡಬಿದಿರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರು ಎಲ್ಲಿಯಾದರೂ ಕಂಡು ಬಂದರೆ 9663889739, 8867145764 ಈ ಸಂಖ್ಯೆಗೆ ಸಂಪರ್ಕಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More »

ಹಿಂ.ಜಾ.ವೇ.ಮುಖಂಡ ಅಕ್ಷಯ್ ರಜಪೂತ್ ಬಂಧನ,ಹಾವೇರಿಗೆ ಜಿಲ್ಲೆಗೆ ಗಡಿಪಾರು

ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಸಮಿತಿ ಸದಸ್ಯ ಅಕ್ಷಯ್ ರಾಜಪೂತ್ ರಾತ್ರಿ ವೇಳೆ ಪೋಲೀಸರು ಮನೆಯಿಂದ ಬಂಧಿಸಿ ಹಾವೇರಿ ಜಿಲ್ಲೆಗೆ ಗಡೀಪಾರು ನಡೆಸುವ ಸಿದ್ದತೆ ನಡೆಸಿದ್ದು ಇದು ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗವಾಗಿ ಇದನ್ನು ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಂತರ ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ.

Read More »

ಉಡುಪಿ : ವಿದ್ಯುತ್‌ ಕಂಬಕ್ಕೆ ಢಿಕ್ಕಿ – ಮಹಿಳೆ ಸಾವು..!

ಪಡುಬಿದ್ರಿ: ನಗರ ಸಮೀಪ ನಂದಿಕೂರು ಗ್ರಾಮದ ಮುದರಂಗಡಿ ಜಂಕ್ಷನ್‌ ಬಳಿ ಬೆಳಗ್ಗೆ ಕೆಂಪು ಬಣ್ಣದ ವ್ಯಾಗನರ್‌ ಕಾರು ವಿದ್ಯುತ್‌ ಕಂಬಕ್ಕೆ ಢಿಕ್ಕಿಯಾಗಿ, ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರು ಪುರುಷೋತ್ತಮ ಆರ್‌. ಆಭ್ಯಂಕರ್‌ ಅವರ ಪತ್ನಿ ಸುಮಂಗಲಾ ಎಂ. (55) ಎಂದು ತಿಳಿದು ಬಂದಿದೆ. ರಾಜ್ಯ ಹೆದ್ದಾರಿ-1ರಲ್ಲಿ ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಅಪಘಾತ ಸಂಭವಿಸಿದೆ. ಈ ದಂಪತಿ ಕಾರ್ಕಳ ಮಾಳದಲ್ಲಿನ ಉಪನಯನ ಕಾರ್ಯಕ್ರಮಕ್ಕೆ ಮಂಗಳೂರು ಕಾವೂರಿನಿಂದ ಹೊರಟು ಹೋಗುತ್ತಿದ್ದರೆಂದು ಸಂಬಂಧಿಕರು ತಿಳಿಸಿದ್ದಾರೆ. ರಾಜ್ಯ …

Read More »

You cannot copy content of this page.